Home ತಾಜಾ ಸುದ್ದಿ ನಾಲ್ವರು ಕಳ್ಳರ ಬಂಧನ: ೧೪ ಮೋಟಾರ್ ಪಂಪಸೆಟ್ ವಶ

ನಾಲ್ವರು ಕಳ್ಳರ ಬಂಧನ: ೧೪ ಮೋಟಾರ್ ಪಂಪಸೆಟ್ ವಶ

0


ಚಿಕ್ಕೋಡಿ: ನಾಲ್ವರು ಪಂಪಸೆಟ್ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಗೋಕಾಕ ತಾಲೂಕಿನ ಕುಲಗೋಡ ಠಾಣೆ ಪೊಲೀಸರು ಆರೋಪಿಗಳಿಂದ ೧೪ ಮೋಟಾರ್ ಪಂಪ್‌ಸೆಟ್ ಹಾಗೂ ಎರಡು ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ.
ಹಡಗಿನಾಳ ಗ್ರಾಮದ ಮಲ್ಲಪ್ಪ ಲಾಡಿ ಎಂಬುವವರು ಆ.೯ರಂದು ತಮ್ಮ ಜಮೀನಿನಲ್ಲಿ ಬೋರವೆಲ್‌ಗೆ ಅಳವಡಿಸಿದ್ದ ೨ ಎಚ್‌ಪಿಯ ವಾಟರ್ ಪಂಪ್‌ಸೆಟ್ ಕಳ್ಳತನವಾಗಿದೆ ಎಂದು ಕುಲಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೂಡಲಗಿ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಕುಲಗೋಡ ಠಾಣೆ ಪಿಎಸ್‌ಐ ಜಿ.ಎಸ್. ಪಾಟೀಲ ಹಾಗೂ ಸಿಬ್ಬಂದಿ ತನಿಖೆ ಕೈಗೊಂಡು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ೨ ಲಕ್ಷ ಮೌಲ್ಯದ ೫ ಎಚ್ಪಿಯ ಮೂರು, ೩.೭ಎಚ್ಪಿಯ ಆರು, ೨.೨ ಎಚ್ಪಿಯ ನಾಲ್ಕು, ೨.೫ ಎಚ್ಪಿಯ ಒಂದು ಸೇರಿ ಒಟ್ಟು ೧೪ ಪಂಪಸೆಟ್ ಹಾಗೂ ಕಳ್ಳತನಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Exit mobile version