Home News ನಾನು ಕೂಡ ಹಿಂದೂ, ನಾನು ಆಂಜನೇಯನ ಭಕ್ತ

ನಾನು ಕೂಡ ಹಿಂದೂ, ನಾನು ಆಂಜನೇಯನ ಭಕ್ತ

ಬೆಂಗಳೂರು: ಆಂಜನೇಯನಿಗೂ ಬಜರಂಗದಳಕ್ಕೂ ಏನ್ ಸಂಬಂಧ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳ ಬ್ಯಾನ್ ಮಾಡ್ತೀವಿ ಅಂದಿದ್ದಕ್ಕೆ ಯಾಕೆ ಅವರು ಗಾಬರಿ ಆಗ್ತಿದ್ದಾರೆ. ಆಂಜನೇಯ ಬೇರೆ, ಬಜರಂಗದಳ ಬೇರೆ. ಸುಮ್ಮನೆ ಪ್ರಚೋದನೆ ಮಾಡುತ್ತಿದ್ದಾರೆ. ಜನರಿಗೆ ಎಲ್ಲವೂ ಅರ್ಥವಾಗಿದೆ ಎಂದರು.
ನಾವೂ ಹನುಮನ ಭಕ್ತರು, ಆಂಜನೇಯನ ಪ್ರವೃತ್ತಿಯವರು, ನಾನು ಕೂಡ ಹಿಂದೂ, ನಾನು ಆಂಜನೇಯನ ಭಕ್ತ, ರಾಮನ ಭಕ್ತ, ಶಿವನ ಭಕ್ತ ಎಂದರು.

Exit mobile version