ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರು ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಸ್ತೆ ಗುಂಡಿ, ಕಸದ ಸಮಸ್ಯೆ, ಸಂಚಾರ ದಟ್ಟಣೆ ಸಮಸ್ಯೆಗಳ ಬಗ್ಗೆ ವಿಶ್ವದೆಲ್ಲೆಡೆ ಗಮನ ಸೆಳೆಯುತ್ತಿದೆ.
ಇದೀಗ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಲುಕಿದ ವ್ಯಕ್ತಿಯೊಬ್ಬರು ‘ಬೆಂಗಳೂರಿನ 18 ಕಿ.ಮೀ ಪ್ರಯಾಣ ಮುಂಬೈನಲ್ಲಿ 120 ಕಿ.ಮಿ ಪ್ರಯಾಣಕ್ಕೆ ಸಮಾನ ಎಂದು ಬೇಸರ ವ್ಯಕ್ತಪಡಿಸಿ ಪೋಸ್ಟ್ ಹಾಕಿದ್ದು, ಸಮಾಜಿಕ ಜಾಲತಾಣದಲ್ಲಿ ಆ ಪೋಸ್ಟ್ ಭಾರಿ ವೈರಲ್ ಆಗಿದೆ.
ಕಳೆದ ಒಂದೆರಡು ತಿಂಗಳ ಹಿಂದೆ ಬೆಂಗಳೂರಿನ ಎಂಜಿನಿಯರ್ ಒಬ್ಬರು ವರ್ಷದಲ್ಲಿ 2 ತಿಂಗಳು ಬೆಂಗಳೂರಿನ ಟ್ರಾಫಿಕ್‌ನಲ್ಲೇ ಕಳೆದು ಹೋಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ಅದು ವೈರಲ್ ಆಗಿತ್ತು. ಆ ಪೋಸ್ಟ್ ಮಾಸುವ ಮುನ್ನವೇ ಮತ್ತೆ ಟ್ರಾಫಿಕ್ ಸಮಸ್ಯೆ ಬಗ್ಗೆ ಬೆಂಗಳೂರಿನ ವ್ಯಕ್ತಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನಮ್ಮ ರಾಜ್ಯದಲ್ಲಿ ಟ್ರಾಫಿಕ್ ಎಂದಾಕ್ಷಣ ಕಣ್ಣ ಮುಂದೆ ಬರುವುದೇ ಬೆಂಗಳೂರು, ಇಂತಹ ದೊಡ್ಡ ದೊಡ್ಡ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬೆಳಗ್ಗೆ ಕೆಲಸಕ್ಕೆ ಹೋಗುವ ಮತ್ತು ಸಂಜೆ ಕೆಲಸದಿಂದ ವಾಪಸ್ ಮನೆಗೆ ಬರುವಾಗ ಪೀಕ್ ಅವರ್‌ಗಳಲ್ಲಂತೂ ಸಂಚಾರ ದಟ್ಟಣೆ ಬಗ್ಗೆ ಹೇಳತೀರದು.
ಮಕ್ಕಳು ಶಾಲೆಗೆ ಸರಿಯಾಗಿ ಹೋಗಲು ಆಗುವುದಿಲ್ಲ, ನೌಕರರು ಕೆಲಸಕ್ಕೆ ಸರಿಯಾದ ಸಮಯಕ್ಕೆ ತಲುಪಲು ಆಗುವುದಿಲ್ಲ. ಪ್ರತಿನಿತ್ಯ ಈ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಒಬ್ಬರಿಗೆ ಒಂದೊಂದು ರೀತಿಯ ಅನುಭವವಾಗಿರುತ್ತದೆ. ಬೆಂಗಳೂರಿನಲ್ಲಿ ನಿತ್ಯ 2500 ವಾಹನಗಳು ನೋಂದಣಿಯಾಗಿ ರಸ್ತೆಗಿಳಿಯುತ್ತಿವೆ.
ಮೆಟ್ರೋ ಸಂಚಾರವಿದ್ದರೂ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತಿಲ್ಲ. ಟ್ರಾಫಿಕ್ ಗೆ ಮುಕ್ತಿ ಯಾವಾಗ ಎಂದು ದಿನ ನಗರದ ನಾಗರಿಕರು ಮಾತ್ರ ಚಿಂತಿಸುವುದು ತಪ್ಪಿಲ್ಲ. ಈ ಮಧ್ಯೆ ರಾಜೀವ್ ಮಂತ್ರಿ ಹೆಸರಿನ ಎಕ್ಸ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ಬೆಂಗಳೂರಿನ ಸಂಚಾರ ದಟ್ಟನೆಯನ್ನು ಮುಂಬೈ ಪ್ರಯಾಣಕ್ಕೆ ಹೋಲಿಸಿದ್ದಾರೆ.
ಬೆಂಗಳೂರಿನ ಸಂಚಾರ ತುಂಬಾ ನಿರಾಶಾದಾಯಕವಾಗಿದೆ, ಯಶವಂತಪುರದಿಂದ ಜಯನಗರಕ್ಕೆ (18.ಕಿ.ಮೀ) ಹೋಗುವುದು ನವಿ ಮುಂಬೈನಿಂದ ಪುಣೆಗೆ (120 ಕಿ.ಮೀ) ಹೋದಂತೆ ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಬೆಂಗಳೂರಿಗರು ಕಾಮೆಂಟ್ ಮಾಡಿ ಸಲಹೆ ನೀಡಿದ್ದಾರೆ. ನ.6ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಇದುವರೆಗೆ 1.5ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಓರ್ವ ಬಳಕೆದಾರ ಈ ಭಾಗದಲ್ಲಿ ಮೆಟ್ರೋ ಇದೆ, ಆದ್ದರಿಂದ ದಟ್ಟಣೆಯ ಬಗ್ಗೆ ದೂರು ನೀಡುವುದು ಹಾಸ್ಯಾಸ್ಪದ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಕಾರನ್ನು ನಿಲ್ಲಿಸಿ, ಮೆಟ್ರೋದಲ್ಲಿ ಪ್ರಯಾಣಿಸಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬ ಯಶವಂತಪುರದಿಂದ ಜಯನಗರಕ್ಕೆ ಮೆಟ್ರೋದಲ್ಲಿ ಕೇವಲ 25 ನಿಮಿಷದಲ್ಲಿ ಪ್ರಯಾಣಿಸಿಬಹುದು.
ಯಾವುದೇ ಇಂಟರ್‌ಚೇಂಜ್ ಅಗತ್ಯವಿಲ್ಲ ಎಂದಿದ್ದಾರೆ.ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರು ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಸ್ತೆ ಗುಂಡಿ, ಕಸದ ಸಮಸ್ಯೆ, ಸಂಚಾರ ದಟ್ಟಣೆ ಸಮಸ್ಯೆಗಳ ಬಗ್ಗೆ ವಿಶ್ವದೆಲ್ಲೆಡೆ ಗಮನ ಸೆಳೆಯುತ್ತಿದೆ.
ಇದೀಗ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಲುಕಿದ ವ್ಯಕ್ತಿಯೊಬ್ಬರು ‘ಬೆಂಗಳೂರಿನ 18 ಕಿ.ಮೀ ಪ್ರಯಾಣ ಮುಂಬೈನಲ್ಲಿ 120 ಕಿ.ಮಿ ಪ್ರಯಾಣಕ್ಕೆ ಸಮಾನ ಎಂದು ಬೇಸರ ವ್ಯಕ್ತಪಡಿಸಿ ಪೋಸ್ಟ್ ಹಾಕಿದ್ದು, ಸಮಾಜಿಕ ಜಾಲತಾಣದಲ್ಲಿ ಆ ಪೋಸ್ಟ್ ಭಾರಿ ವೈರಲ್ ಆಗಿದೆ.
ಕಳೆದ ಒಂದೆರಡು ತಿಂಗಳ ಹಿಂದೆ ಬೆಂಗಳೂರಿನ ಎಂಜಿನಿಯರ್ ಒಬ್ಬರು ವರ್ಷದಲ್ಲಿ 2 ತಿಂಗಳು ಬೆಂಗಳೂರಿನ ಟ್ರಾಫಿಕ್‌ನಲ್ಲೇ ಕಳೆದು ಹೋಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ಅದು ವೈರಲ್ ಆಗಿತ್ತು. ಆ ಪೋಸ್ಟ್ ಮಾಸುವ ಮುನ್ನವೇ ಮತ್ತೆ ಟ್ರಾಫಿಕ್ ಸಮಸ್ಯೆ ಬಗ್ಗೆ ಬೆಂಗಳೂರಿನ ವ್ಯಕ್ತಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನಮ್ಮ ರಾಜ್ಯದಲ್ಲಿ ಟ್ರಾಫಿಕ್ ಎಂದಾಕ್ಷಣ ಕಣ್ಣ ಮುಂದೆ ಬರುವುದೇ ಬೆಂಗಳೂರು, ಇಂತಹ ದೊಡ್ಡ ದೊಡ್ಡ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬೆಳಗ್ಗೆ ಕೆಲಸಕ್ಕೆ ಹೋಗುವ ಮತ್ತು ಸಂಜೆ ಕೆಲಸದಿಂದ ವಾಪಸ್ ಮನೆಗೆ ಬರುವಾಗ ಪೀಕ್ ಅವರ್‌ಗಳಲ್ಲಂತೂ ಸಂಚಾರ ದಟ್ಟಣೆ ಬಗ್ಗೆ ಹೇಳತೀರದು.
ಮಕ್ಕಳು ಶಾಲೆಗೆ ಸರಿಯಾಗಿ ಹೋಗಲು ಆಗುವುದಿಲ್ಲ, ನೌಕರರು ಕೆಲಸಕ್ಕೆ ಸರಿಯಾದ ಸಮಯಕ್ಕೆ ತಲುಪಲು ಆಗುವುದಿಲ್ಲ. ಪ್ರತಿನಿತ್ಯ ಈ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಒಬ್ಬರಿಗೆ ಒಂದೊಂದು ರೀತಿಯ ಅನುಭವವಾಗಿರುತ್ತದೆ. ಬೆಂಗಳೂರಿನಲ್ಲಿ ನಿತ್ಯ 2500 ವಾಹನಗಳು ನೋಂದಣಿಯಾಗಿ ರಸ್ತೆಗಿಳಿಯುತ್ತಿವೆ.
ಮೆಟ್ರೋ ಸಂಚಾರವಿದ್ದರೂ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತಿಲ್ಲ. ಟ್ರಾಫಿಕ್ ಗೆ ಮುಕ್ತಿ ಯಾವಾಗ ಎಂದು ದಿನ ನಗರದ ನಾಗರಿಕರು ಮಾತ್ರ ಚಿಂತಿಸುವುದು ತಪ್ಪಿಲ್ಲ. ಈ ಮಧ್ಯೆ ರಾಜೀವ್ ಮಂತ್ರಿ ಹೆಸರಿನ ಎಕ್ಸ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ಬೆಂಗಳೂರಿನ ಸಂಚಾರ ದಟ್ಟನೆಯನ್ನು ಮುಂಬೈ ಪ್ರಯಾಣಕ್ಕೆ ಹೋಲಿಸಿದ್ದಾರೆ.
ಬೆಂಗಳೂರಿನ ಸಂಚಾರ ತುಂಬಾ ನಿರಾಶಾದಾಯಕವಾಗಿದೆ, ಯಶವಂತಪುರದಿಂದ ಜಯನಗರಕ್ಕೆ (18.ಕಿ.ಮೀ) ಹೋಗುವುದು ನವಿ ಮುಂಬೈನಿಂದ ಪುಣೆಗೆ (120 ಕಿ.ಮೀ) ಹೋದಂತೆ ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಬೆಂಗಳೂರಿಗರು ಕಾಮೆಂಟ್ ಮಾಡಿ ಸಲಹೆ ನೀಡಿದ್ದಾರೆ. ನ.6ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಇದುವರೆಗೆ 1.5ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಓರ್ವ ಬಳಕೆದಾರ ಈ ಭಾಗದಲ್ಲಿ ಮೆಟ್ರೋ ಇದೆ, ಆದ್ದರಿಂದ ದಟ್ಟಣೆಯ ಬಗ್ಗೆ ದೂರು ನೀಡುವುದು ಹಾಸ್ಯಾಸ್ಪದ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಕಾರನ್ನು ನಿಲ್ಲಿಸಿ, ಮೆಟ್ರೋದಲ್ಲಿ ಪ್ರಯಾಣಿಸಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬ ಯಶವಂತಪುರದಿಂದ ಜಯನಗರಕ್ಕೆ ಮೆಟ್ರೋದಲ್ಲಿ ಕೇವಲ 25 ನಿಮಿಷದಲ್ಲಿ ಪ್ರಯಾಣಿಸಿಬಹುದು. ಯಾವುದೇ ಇಂಟರ್‌ಚೇಂಜ್ ಅಗತ್ಯವಿಲ್ಲ ಎಂದಿದ್ದಾರೆ.