Home ನಮ್ಮ ಜಿಲ್ಲೆ ಬೆಂಗಳೂರು 9ರಂದು ಡಾ. ಸ್ಫೂರ್ತಿ ಐತಾಳ್ ರಂಗಪ್ರವೇಶ

9ರಂದು ಡಾ. ಸ್ಫೂರ್ತಿ ಐತಾಳ್ ರಂಗಪ್ರವೇಶ

0

ಬೆಂಗಳೂರು: ರೇಸ್‌ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ನ. 9ರಂದು ಸಂಜೆ 5ಕ್ಕೆ ಸಂಯೋಗ – ಕನಕ್ಟಿಂಗ್ ಆರ್ಟ್ಸ್ ಸಂಸ್ಥೆಯು ‘ಶಾಂಭವಿ’ ಶೀರ್ಷಿಕೆ ಅಡಿಯಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಯುವ ಕಲಾವಿದೆ, ಆಯುರ್ವೇದ ತಜ್ಞೆ ಡಾ. ಸ್ಫೂರ್ತಿ ಐತಾಳ್ ಅವರು ರಂಗಪ್ರವೇಶ ಮಾಡಲಿದ್ದಾರೆ.

ಗುರು ವಿದುಷಿ ಲತಾ ಲಕ್ಷ್ಮೀಶ ಅವರ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ಲೋಕೇಶ್ ಚೌಧರಿ, ಸಿಇಒ ಡಾ. ವರ್ಷಾ ಮತ್ತು ಹಿರಿಯ ವಿದ್ವಾಂಸ ರಮೇಶ್ ಚಡಗ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಬೇಕರಿ ಉದ್ಯಮಿ ಮಂಜುನಾಥ ಐತಾಳ್ ಮತ್ತು ಶಿಕ್ಷಕಿ ಶಶಿಕಲಾ ಅವರ ಪುತ್ರಿಯಾದ ಸ್ಫೂರ್ತಿ, ಈಗಾಗಲೇ ಭರತನಾಟ್ಯದ ಜೂನಿಯರ್, ಸೀನಿಯರ್ ಸೇರಿದಂತೆ ವಿದ್ವತ್ ಪರೀಕ್ಷೆಯನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಎಳವೆಯಿಂದಲೂ ವಿದುಷಿ ಲತಾ ಅವರಲ್ಲಿ ಭರತನಾಟ್ಯವನ್ನು ಕಲಿತು ನಾಡಿನ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಕಲಾ ಪ್ರದರ್ಶನವನ್ನು ಮಾಡಿರುವ ಈಕೆ ಅದಮ್ಯ ಭರವಸೆ ಮತ್ತು ಉತ್ಸಾಹಗಳಿಂದ ಕಲೆ ಮತ್ತು ವೈದ್ಯಕೀಯ ರಂಗವನ್ನು ಸಮನ್ವಯಗೊಳಿಸಿಕೊಂಡು ಸಾಗುತ್ತಿದ್ದಾರೆ. ವೈದ್ಯಳಾಗಿರುವ ಜೊತೆಗೆ ಉತ್ತಮ ವೇದಿಕೆ ಕಲಾವಿದೆ ಆಗಬೇಕು. ನೃತ್ಯ ಶಿಕ್ಷಕಿಯೂ ಆಗಬೇಕು ಎಂಬುದು ಇವರ ಹೆಬ್ಬಯಕೆ. ಈ ನಿಟ್ಟಿನಲ್ಲಿ ರಂಗ ಪ್ರವೇಶವು ಸ್ಫೂರ್ತಿಗೆ ಹೊಸ ಚೈತನ್ಯ ನೀಡಿ ಹೊಸ ಹೊಸ ಅವಕಾಶಗಳ ದ್ವಾರಗಳನ್ನು ತೆರೆಯಲಿದೆ ಎಂಬ ಆಶಾವಾದವಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version