Home ತಾಜಾ ಸುದ್ದಿ ತೇರದಾಳ: ಕೊನೆಯ 30 ನಿಮಿಷದಲ್ಲಿ 7 ನಾಮಪತ್ರ ಹಿಂದಕ್ಕೆ

ತೇರದಾಳ: ಕೊನೆಯ 30 ನಿಮಿಷದಲ್ಲಿ 7 ನಾಮಪತ್ರ ಹಿಂದಕ್ಕೆ

0

ಬಾಗಲಕೋಟೆ: ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 19 ಸದಸ್ಯರ ನಾಮಪತ್ರಗಳು ಊರ್ಜಿತಗೊಂಡಿದ್ದವು. ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಸೋಮವಾರ ಯಾರೂ ನಾಮಪತ್ರ ಹಿಂಪಡೆದುಕೊಂಡಿರಲಿಲ್ಲ. ಆದರೆ, ಕೊನೆಯ 30 ನಿಮಿಷಗಳಲ್ಲಿ ಏಳು ಜನ ನಾಮಪತ್ರ ಹಿಂಪಡೆದಿದ್ದು, ಅಂತಿಮವಾಗಿ 12 ಜನ ಸದಸ್ಯರು ಕಣದಲ್ಲಿದ್ದಾರೆ.
ಸಿದ್ದು ಸವದಿ(ಬಿಜೆಪಿ), ಸಿದ್ದು ಕೊಣ್ಣೂರ(ಕಾಂಗ್ರೆಸ್), ಡಾ. ಪದ್ಮಜೀತ ನಾಡಗೌಡ ಪಾಟೀಲ(ಪಕ್ಷೇತರ), ಸುರೇಶ ಮಡಿವಾಳರ(ಜೆಡಿಎಸ್),ಅರ್ಜುನ ಹಲಗಿಗೌಡರ(ಆಪ್), ವಿಠ್ಠಲ ಗುಣದಾಳ(ಎಸ್‌ಡಿಪಿಐ), ಧರೆಪ್ಪ ದಾನಗೌಡ(ಕೆಆರ್‌ಎಸ್), ಅಂಬಾದಾಸ ಕಾಮೂರ್ತಿ(ಪಕ್ಷೇತರ), ಸಂತೋಷ ಹನಗಂಡಿ, ಅಬ್ಬಾಸಲಿ ಮುಲ್ಲಾ(ಆರ್‌ಪಿಐ), ಮಹಾಲಿಂಗ ಹ್ಯಾಗಾಡಿ(ಪಕ್ಷೇತರ), ಅಡಿವೆಪ್ಪ ಉದ್ದಪ್ಪಗೋಳ ಕಣದಲ್ಲಿ ಉಳಿದಿದ್ದಾರೆ.

Exit mobile version