Home ತಾಜಾ ಸುದ್ದಿ ಜೋಶಿ ಪಕ್ಷ ನಿಷ್ಠೆ ಹೇಳಿಕೆಗೆ ಶೆಟ್ಟರ್‌ ಸಿಡಿಮಿಡಿ

ಜೋಶಿ ಪಕ್ಷ ನಿಷ್ಠೆ ಹೇಳಿಕೆಗೆ ಶೆಟ್ಟರ್‌ ಸಿಡಿಮಿಡಿ

0

ಹುಬ್ಬಳ್ಳಿ: ಪಕ್ಷಕ್ಕೆ ನಿಷ್ಠರಾದವರು ಪಕ್ಷದಲ್ಲಿ ಇರುತ್ತಾರೆ. ಇಲ್ಲದವರು ಪಕ್ಷ ತೊರೆಯುತ್ತಾರೆ ಎಂಬ ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಲ್ಹಾದ ಜೋಶಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಜಗದೀಶ ಶೆಟ್ಟರ, ಪಕ್ಷ ನಿಷ್ಠೆಯ ಬಗ್ಗೆ ಮಾತನಾಡಲು ಜೋಶಿಯವರಿಗೆ ಏನು ಅರ್ಹತೆ ಇದೆ ಎಂದು ಪ್ರಶ್ನಿಸಿದರು. ನಾನು ಪಕ್ಷ ನಿಷ್ಠನಾಗಿರಲಿಲ್ಲವೇ? ರಾಮದಾಸ್ ಪಕ್ಷ ನಿಷ್ಠರಾಗಿಲ್ಲವೇ? ನನ್ನ ಪಕ್ಷ ನಿಷ್ಠೆ ಕಡೆಗಣಿಸಿ ಪಕ್ಷದ ಹೊರ ಹೋಗುವಂತೆ ಮಾಡಿದ್ದು ಯಾರು? ಹೀಗಾಗಿ ಜೋಶಿಯವರಿಗಾಗಲಿ, ಆ ಪಕ್ಷ ಬೇರೆಯವರಿಗಾಗಲಿ ಪಕ್ಷ ನಿಷ್ಠೆ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ ಎಂದು ಶೆಟ್ಟರ ಕುಟುಕಿದರು.

Exit mobile version