Home ತಾಜಾ ಸುದ್ದಿ ಗೋವಾ ವಿಮಾನ ದರ ಏರಿಕೆ

ಗೋವಾ ವಿಮಾನ ದರ ಏರಿಕೆ

0
Goa

ಪಣಜಿ: ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಗೋವಾಕ್ಕೆ ಆಗಮಿಸುವ ವಿಮಾನ ಟಿಕೆಟ್ ದರ ಮತ್ತೆ ಏರಿಕೆಯಾಗಿದೆ. ಅಕ್ಟೋಬರ್ 25ರಂದು ಮುಂಬೈ-ಗೋವಾ ಮಾರ್ಗದ ವಿಮಾನ ಪ್ರಯಾಣ ದರ 3,500 ರೂ. ದಿಂದ ರೂ. 9,000ಗೆ ಏರಿಕೆಯಾಗಿದೆ. ಇದರಿಂದಾಗಿ ಹಬ್ಬದ ಸಂದರ್ಭದಲ್ಲಿ ಗೋವಾಕ್ಕೆ ಆಗಮಿಸುವವರ ಜೇಬಿಗೆ ಕತ್ತರಿ ಬೀಳುವಂತಾಗಿದೆ.
ಗೋವಾ ದಾಬೋಲಿಂ ವಿಮಾನ ನಿಲ್ದಾಣದಿಂದ ಲಭ್ಯವಾಗಿರುವ ಮಾಹಿತಿಯ ಅನುಸಾರ, ಅಹಮದಾಬಾದ್‌ನಿಂದ ಗೋವಾ ವಿಮಾನದ ದರವು ಇತರ ಸಮಯಗಳಲ್ಲಿ 6,500 ರೂ. ಗಳಾಗಿದ್ದರೆ ಪ್ರಸ್ತುತ ಹಬ್ಬದ ಸಂದರ್ಭದಲ್ಲಿ 11,400 ರೂ. ಗೆ ಏರಿಕೆಯಾಗಿದೆ. ಕೊಲ್ಕತ್ತಾದಿಂದ ಗೋವಾಕ್ಕೆ ವಿಮಾನ ಪ್ರಯಾಣ ದರ 6,500 ರೂ.ನಿಂದ ಹಬ್ಬದ ಸಂದರ್ಭದಲ್ಲಿ 10,000 ರೂ.ಗೆ ಏರಿಕೆಯಾಗಿದೆ.

Exit mobile version