Home ತಾಜಾ ಸುದ್ದಿ ಕೆ.ಆರ್.ಎಸ್.ನಲ್ಲಿ ಬೃಹತ್ ಯೋಗ

ಕೆ.ಆರ್.ಎಸ್.ನಲ್ಲಿ ಬೃಹತ್ ಯೋಗ

0

ಶ್ರೀರಂಗಪಟ್ಟಣ : ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆಆರ್ ಎಸ್ ಬೃಂಧಾವನ ಗಾರ್ಡನ್ ನಲ್ಲಿ ಜಿಲ್ಲಾಡಳಿತದ ವತಿಯಿಂದ 9ನೇ ಅಂತರರಾಷ್ಟ್ರೀಯ ಬೃಹತ್ ಯೋಗ ಕಾರ್ಯಕ್ರಮ ನಡೆಯಿತು.

ಚಂದ್ರವನ ಆಶ್ರಮದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ದಿವ್ಯ ಸನ್ನಿಧಿಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡುದರು.
ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು . ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸೇರಿದಂತೆ ಮಂಡ್ಯ ಉಸ್ತುವಾರಿ ಕಾರ್ಯದರ್ಶಿ ಜಾಪರ್, ಪಲೀಸ್ ವರಿಷ್ಠಾಧಿಕಾರಿ‌ ಯತೀಶ್, ಜಿಪಂ ಸಿಇಒ ,ತಹಶಿಲ್ದಾರ್ ಇತರರು ಉಪಸ್ಥಿತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪೋಷಕರು ಯೋಗದಲ್ಲಿ ಪಾಲ್ಗೊಂಡಿದ್ದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ್, ಯೋಗದಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ನೆಮ್ಮದಿ ದೊರೆಯುತ್ತದೆ. ಆರೋಗ್ಯವನ್ನು‌ ಹತೋಟಿಯಲ್ಲಿಟ್ಡುಕೊಳ್ಳಲು ಪ್ರತೀನಿತ್ಯ ಒಂದು ಗಂಟೆ ಸಮಯ ಯೋಗಾಭ್ಯಾಸಕ್ಕೆ ಒತ್ತು ಕೊಡಬೇಕು ಎಂದರು.

Exit mobile version