Home ತಾಜಾ ಸುದ್ದಿ ಕೆಲವು ರೈಲುಗಳ ಸಮಯ ಪರಿಷ್ಕರಣೆ

ಕೆಲವು ರೈಲುಗಳ ಸಮಯ ಪರಿಷ್ಕರಣೆ

0

ಹುಬ್ಬಳ್ಳಿ: ಮೇ ೨೭ ರಿಂದ ಜಾರಿಗೆ ಬರುವಂತೆ ಸೊಲ್ಲಾಪುರ-ಮೈಸೂರು ಗೋಲ್ ಗುಂಬಜ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ ೧೬೫೩೬), ವಿಜಯಪುರ-ಯಶವಂತಪುರ ಎಕ್ಸ್ಪ್ರೆಸ್ (ರೈಲು ಸಂಖ್ಯೆ ೦೬೫೪೬) ಮತ್ತು ಕಾರಟಗಿ-ಯಶವಂತಪುರ ಎಕ್ಸ್ಪ್ರೆಸ್ (ರೈಲು ಸಂಖ್ಯೆ ೧೬೫೪೬) ರೈಲುಗಳ ಕೆಲವು ನಿಲ್ದಾಣಗಳಲ್ಲಿನ
ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಪರಿಷ್ಕೃತ ಸಮಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲದ ಲಿಂಕ್ ಮೇಲೆ ಕ್ಲಿಕ್ ಮಾಡಿ https://swr.indianrailways.gov.in/view_detail.jsp?lang=0&dcd=6550&id=0,4,268 ಅಥವಾ www.enquiry.indianrail.gov.in ಗೆ ಭೇಟಿ ನೀಡಿ ಇಲ್ಲವೇ ೧೩೯ ನಂಬರಿಗೆ ಕರೆ ಮಾಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.
ಪ್ರಯಾಣಿಕರು ದೂರದ ನಗರಗಳಿಗೆ ಪ್ರಯಾಣಿಸುವ ಮೊದಲು ಪರಿಷ್ಕೃತ ವೇಳಾಪಟ್ಟಿಯನ್ನು ಪರಿಶೀಲಿಸಿ ಪ್ರಯಾಣಿಸಬೇಕು ಎಂದು ನೈಋತ್ಯ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕ ಮುಖ್ಯ ಅಧಿಕಾರಿ ಅನೀಶ್ ಹೆಗಡೆ ಕೋರಿದ್ದಾರೆ.

Exit mobile version