Home ತಾಜಾ ಸುದ್ದಿ ಕುಂಭಮೇಳದ ಮೂಲಕ ಜನರಲ್ಲಿ ಜಾಗೃತಿ

ಕುಂಭಮೇಳದ ಮೂಲಕ ಜನರಲ್ಲಿ ಜಾಗೃತಿ

0
ಕುಂಭಮೇಳ

ಮಂಡ್ಯ: ಮೂರು ನದಿಗಳು ಸಂಗಮವಾಗುವ ಸ್ಥಳದಲ್ಲಿ ಕುಂಭಮೇಳವನ್ನು ಮಾಡುವುದರ ಮುಖಾಂತರ ಈ ಭಾಗದ ಎಲ್ಲಾ ಜನರನ್ನು ಜಾಗೃತಗೊಳಿಸುವ ಹಾಗೂ ತನ್ಮೂಲಕ ಧಾರ್ಮಿಕ ಚಟುವಟಿಕೆಗಳಿಗೆ ಹೊಸ ಸ್ವರೂಪವನ್ನು ನೀಡುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್‌ ಅವರು ತಿಳಿಸಿದರು.
ಕುಂಭಮೇಳವನ್ನು ಸಾರ್ವಜನಿಕರಿಗೆ ಪರಿಚಯಿಸುವಂತಹ ನಾಡಿನ ಸಾಧುಸಂತರನ್ನು ಕರೆದುಕೊಂಡು ಬಂದು ಕುಂಭಮೇಳದ ಮಹತ್ವವನ್ನ ತಿಳಿಸುವಂತಹ ಪ್ರಯತ್ನ ಪ್ರಯತ್ನವನ್ನು ಡಾ. ನಾರಾಯಣಗೌಡ ರವರು ಮಾಡುತ್ತಿದ್ದಾರೆ. ಭಾರತೀಯ ಸಂಸ್ಕೃತಿ ಧಾರ್ಮಿಕ ತಳಹದಿಯಲ್ಲಿ ನಿಂತಿದೆ. ಸಾಂಸ್ಕೃತಿಕವಾಗಿ ಭಾರತ ಶ್ರೀಮಂತ ಆಗಿರುವಂತಹ ಹಿನ್ನೆಲೆಯಲ್ಲಿ ಜಗತ್ತಿನ ಎಲ್ಲ ಜನರು ಭಾರತವನ್ನು ನೋಡುವುದಕ್ಕೋಸ್ಕರ ಬಂದಿದ್ದಾರೆ ಎಂದರು.
ಇಲ್ಲಿರುವ ಸಾಂಸ್ಕೃತಿಕ ಚಟುವಟಿಕೆಗಳು ಧಾರ್ಮಿಕತೆಯ ಆಚರಣೆಗಳು ನದಿ, ಪರ್ವತವನ್ನು ಪೂಜಿಸುವಂತ ಪದ್ಧತಿಗಳು ಇವೆಲ್ಲವೂ ಬೇರೆ ಬೇರೆ ದೇಶಗಳಲ್ಲಿ ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ವಿಶೇಷವಾದ ಕಾಳಜಿ ಕಾಣಿಸುತ್ತಿದೆ ಎಂದರು.

Exit mobile version