Home ತಾಜಾ ಸುದ್ದಿ ಕಾರ್ಯಕ್ರಮಕ್ಕೆ 500, ಅಂದ್ರೆ ಮತಕ್ಕೆ ಎಷ್ಟು?

ಕಾರ್ಯಕ್ರಮಕ್ಕೆ 500, ಅಂದ್ರೆ ಮತಕ್ಕೆ ಎಷ್ಟು?

0
Ashok

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವುದಕ್ಕೆ ಕಂದಾಯ ಸಚಿವ ಆರ್‌. ಅಶೋಕ ಪ್ರತಿಕ್ರಿಯಿಸಿದ್ದಾರೆ.
ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ತಲೆತಗ್ಗಿಸುವ ಹೇಳಿಕೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ. ಅಲ್ಲದೇ ಅವರು ನೀಡಿದ ಹೇಳಿಕೆ ಮತದಾರರನ್ನು ಅವಮಾನ ಮಾಡಿದಂತಿದೆ ಎಂದು ಟೀಕಿಸಿದರು. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಯಾವ ರೀತಿ ಹಣದ ಹೊಳೆ ಹರಿಸುತ್ತಾರೆ. ಕಾರ್ಯಕ್ರಮಕ್ಕೆ ಬರುವುದಕ್ಕೆ 500 ರೂಪಾಯಿ ಅಂದ್ರೆ, ಮತ ಪಡೆಯಲು ಇನ್ನೆಷ್ಟು ಕೊಡ್ತಾರೆ ಎಂದು ಅವರು ಪ್ರಶ್ನಿಸಿದರು.

Exit mobile version