Home ತಾಜಾ ಸುದ್ದಿ ಎರಡುವರೆ ವರ್ಷ ಕಾಂಗ್ರೆಸ್ ಹೆಡ್ ಲೆಸ್ ಆಗಿತ್ತು

ಎರಡುವರೆ ವರ್ಷ ಕಾಂಗ್ರೆಸ್ ಹೆಡ್ ಲೆಸ್ ಆಗಿತ್ತು

0

ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷಕ್ಕೆ ಎರಡುವರೆ ವರ್ಷ ರಾಷ್ಟ್ರೀಯ ಅಧ್ಯಕ್ಷರೇ ಇರಲಿಲ್ಲ. ಹೆಡ್ ಲೆಸ್ ಪಾರ್ಟಿಯಾಗಿತ್ತು ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ, ಹೊಸ ರಾಜ್ಯಾಧ್ಯಕ್ಷರ ಆಯ್ಕೆ ಮಾಡಿಲ್ಲ ಎಂದು ಟೀಕಿಸುವ ಕಾಂಗ್ರೆಸ್ ನವರು ತಮ್ಮ ಪಕ್ಷದ ಸ್ಥಿತಿ ಹಿಂದೆ ಏನಿತ್ತು ಎಂಬುದನ್ನು ನೋಡಿಕೊಳ್ಳಲಿ ಎಂದು ಹೇಳಿದರು.
ಕೇಂದ್ರದಿಂದ ಅಕ್ಕಿ ಬಯಸುವವರು ಕೇಂದ್ರವನ್ನು ಕೇಳಿ ಕಾಂಗ್ರೆಸ್ ಗ್ಯಾರಂಟಿ ಅಕ್ಕಿ ಕೊಡುವ ಯೋಜನೆ ಘೋಷಣೆ ಮಾಡಬೇಕಿತ್ತು. ಹತ್ತು ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿ ಈಗ ಕೊಡಲಾಗದೇ ಕೇಂದ್ರದ ಮೇಲೆ ಅರೋಪ ಮಾಡುವುದು ಸರಿಯಲ್ಲ. ಕೇಂದ್ರ ಸರ್ಕಾರಕ್ಕೂ ಜವಾಬ್ದಾರಿ ಇದೆ. ಈಗಾಗಲೇ ದೇಶದ 80 ಕೋಟಿ ಜನರಿಗೆ ಕೇಂದ್ರ ಅಕ್ಕಿ ಕೊಡುತ್ತಿದೆ. ಇನ್ನುಳಿದ 60 ಕೋಟಿ ಜನರಿಗೆ ಆಹಾರ ದೊರಕಿಸುವುದು ಕೇಂದ್ರ ಸರ್ಕಾರದ್ದೇ ಜವಾಬ್ದಾರಿ ಇದೆ. ಹೀಗಾಗಿ ತುರ್ತು ಸಂದರ್ಭದಲ್ಲಿ, ಆಹಾರ ಕೊರತೆ ಸನ್ನಿವೇಶ ಸೃಷ್ಟಿಯಾದರೆ ಪೂರೈಸಲು ದಾಸ್ತಾನು ( ಬಫರ್ ಸ್ಟಾಕ್ ) ಮಾಡಿಕೊಳ್ಳಬೇಕಾಗುತ್ತದೆ. ಅದನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಹೇಳಿದರು.
ಸುಳ್ಳು ಗ್ಯಾರಂಟಿ…ಹೆಣಗಾಟ: ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಕೊಡಲಾಗದೇ ಕಾಂಗ್ರೆಸ್ ಸರ್ಕಾರ ಹೆಣಗಾಟ ಮಾಡುತ್ತಿದೆ. ಘೋಷಣೆ ಮಾಡುವಾಗ ಮುಂದಾಲೋಚಣೆ ಇರಲಿಲ್ಲವೇ?
ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಸಬೂಬು ಹೇಳದೇ, ಕಾಲಹರಣ ಮಾಡದೇ ಜಾರಿಗೊಳಿಸಲಿ. ಯೋಜನೆ ಜಾರಿ ಮಾಡದೇ ಮುಂದೂಡುವುದು ಕಾಂಗ್ರೆಸ್ ದೂರಾಲೋಚನೆ. ಈ ಧೋರಣೆಯನ್ನ ಖಂಡಿಸುತ್ತೇನೆ ಎಂದು ಜೋಶಿ ಹೇಳಿದರು.

Exit mobile version