Home ತಾಜಾ ಸುದ್ದಿ ಇಂದಿರಾ ಕ್ಯಾಂಟಿನ್ ಪುನಾರಂಭ

ಇಂದಿರಾ ಕ್ಯಾಂಟಿನ್ ಪುನಾರಂಭ

0

ಬೆಂಗಳೂರು: ಇಂದಿರಾ ಕ್ಯಾಂಟಿನ್ ಪುನಾರಂಭ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಸೂಚನೆ ನೀಡಿದೆ.
ಹಿಂದಿನ ಸರ್ಕಾರ ಬಂದ್ ಮಾಡಿದ್ದ ಇಂದಿರಾ ಕ್ಯಾಂಟೀನ್ ಪುನಾರಂಭಕ್ಕೆ ರಾಜ್ಯ ಸರ್ಕಾರ ಸೂಚಿಸಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಜಯರಾಂ ರಾಯ್‌ಪುರ ತಿಳಿಸಿದರು.
ಈಗಾಗಲೇ ಇಂದಿರಾ ಕ್ಯಾಂಟೀನ್ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಸದ್ಯ ಇರುವ ಕ್ಯಾಂಟೀನ್‌ಗಳ ಪೈಕಿ 10 ಮೊಬೈಲ್ ಕ್ಯಾಂಟೀನ್ ಬಂದ್ ಆಗಿವೆ. 243 ಸ್ಥಳಗಳಲ್ಲಿ ಕ್ಯಾಂಟೀನ್ ಆರಂಭಿಸುತ್ತೇವೆ. ಕ್ಯಾಂಟೀನ್​ ಅಡುಗೆ ಕೋಣೆ ವಸ್ತುಗಳನ್ನು ರೀಪ್ಲೇಸ್ ಮಾಡಬೇಕಿದೆ ಎಂದು ತಿಳಿಸಿದರು. ಅಲ್ಲದೇ ಉಪಾಹಾರ ಬೆಲೆ 5 ರಿಂದ 10 ರೂಪಾಯಿಗೆ ಏರಿಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

Exit mobile version