Home News ಆಷಾಢ ಏಕಾದಶಿ: ಪಂಢರಪುರಕ್ಕೆ ವಿಶೇಷ ರೈಲು

ಆಷಾಢ ಏಕಾದಶಿ: ಪಂಢರಪುರಕ್ಕೆ ವಿಶೇಷ ರೈಲು

ಹುಬ್ಬಳ್ಳಿ: ಆಷಾಧ ಏಕಾದಶಿ ನಿಮಿತ್ತ ಪಂಢರಪುರಕ್ಕೆ ನೈಋತ್ಯ ರೈಲ್ವೆಯು ಜೂನ್ ೨೮,೨೯ರಂದು ಹುಬ್ಬಳ್ಳಿ-ಪಂಢರಪುರ ವಿಶೇಷ ರೈಲು ಸಂಚಾರ ಸೇವೆ ವ್ಯವಸ್ಥೆ ಮಾಡಿದೆ. ಬೆಳಿಗ್ಗೆ ೭ ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮಧ್ಯಾಹ್ನ ೩.೪೫ಕ್ಕೆ ಪಂಢರಪುರ ತಲುಪಲಿದೆ.
ಬೆಳಿಗ್ಗೆ ೭ಕ್ಕೆ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣದಿಂದ ರೈಲು ಹೊರಟು ೭.೨೮ಕ್ಕೆ ಧಾರವಾಡ, ೮.೫೦ಕ್ಕೆ ಲೋಂಡಾ, ೯.೧೭ಕ್ಕೆ ಖಾನಾಪುರ, ೯.೪೫ಕ್ಕೆ ಬೆಳಗಾವಿಗೆ, ೧೦.೪೯ಕ್ಕೆ ಗೋಕಾಕ ರೋಡ್, ೧೧ಕ್ಕೆ ಘಟಪ್ರಭಾ, ೧೧.೩೩ಕ್ಕೆ ರಾಯಬಾಗ, ೧೨.೦೮ಕ್ಕೆ ಉಗಾರಖುರ್ದಾ, ೧.೪೦ಕ್ಕೆ ಮಿರಜ್ ಹಾಗೂ ೪.೪೦ಕ್ಕೆ ಪಂಢರಪುರಕ್ಕೆ ತಲುಪಲಿದೆ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ

Exit mobile version