Home ತಾಜಾ ಸುದ್ದಿ ಆಡಳಿತ ಕೆಲವರ ಕೈಗೊಂಬೆಯಾಗಿದೆ

ಆಡಳಿತ ಕೆಲವರ ಕೈಗೊಂಬೆಯಾಗಿದೆ

0

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಗಂಭೀರತೆ ಇಲ್ಲ. ಆಡಳಿತ ಕೆಲವರ ಕೈಗೊಂಬೆಯಾಗಿದೆ. ಸಿದ್ದರಾಮಯ್ಯ ಅವರ ಸಂಪುಟ ಸಚಿವರು ಇಲಾಖೆಯಲ್ಲಿ ತೊಡಗಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಆಡಳಿತದಲ್ಲಿ, ಸಮಾಜದಲ್ಲಿ ಗೊಂದಲದ ಗೂಡಾಗಿದೆ ಎಂದು ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಗಳಿಗೆ ಗಂಭೀರತೆ ಇಲ್ಲದಾಗಿದೆ. ತಮ್ಮ ಚುನಾವಣೆಗೆ ಖರ್ಚು ಮಾಡಿದ ಹಣ ಹೊಂದಿಸುವುದರಲ್ಲಿ, ಮುಂದಿನ ಚುನಾವಣೆಗೆ ಹಣ ಹೊಂದಿಸುವುದರಲ್ಲಿದ್ದಾರೆ ಎಂದು ಆರೋಪಿಸಿದರು.
ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಇದು ತುಘಲಕ್ ಸರ್ಕಾರ ಎಂಬ ಮಾತು ಕೇಳಿದ್ದೇವೆ. ಕರ್ನಾಟಕದ ಜನರ ಭಾವನೆ ಧಿಕ್ಕರಿಸಿ ಮನಬಂದಂತೆ ಆಡಳಿತ ಮಾಡಲಾಗುತ್ತಿದೆ. ನಾಲ್ಕು ತಿಂಗಳಲ್ಲಿಯೇ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ತಲೆ ತಗ್ಗಿಸುವ ರೀತಿ ಆಗಿದೆ. ಜನರ ಹಿತದ ಬಗ್ಗೆ ಗಂಭೀರತೆ ಇಲ್ಲ ಎಂದರು.

https://samyuktakarnataka.in/%e0%b2%af%e0%b3%81%e0%b2%a6%e0%b3%8d%e0%b2%a7%e0%b2%aa%e0%b3%80%e0%b2%a1%e0%b2%bf%e0%b2%a4-%e0%b2%87%e0%b2%b8%e0%b3%8d%e0%b2%b0%e0%b3%87%e0%b2%b2%e0%b3%8d-%e0%b2%89%e0%b2%a4%e0%b3%8d%e0%b2%a4/

Exit mobile version