Home ತಾಜಾ ಸುದ್ದಿ ಹಿರಿಯ ನಟ ಸಮೀರ್‌ ಖಾಖರ್‌ ನಿಧನ

ಹಿರಿಯ ನಟ ಸಮೀರ್‌ ಖಾಖರ್‌ ನಿಧನ

0
Sameer khakar

ಹಿಂದಿ ಚಿತ್ರರಂಗದ ಹಿರಿಯ ನಟ ಸಮೀರ್‌ ಖಾಖರ್‌(71) ಇಂದು ನಿಧನರಾದರು. ಉಸಿರಾಟದ ತೊಂದರೆಯಿಂದಾಗಿ ಮಂಗಳವಾರ ಮುಂಬೈನ ಬೊರಿವಲಿಯಲ್ಲಿರುವ ಎಂಎಂ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಸಿನಿಮಾರಂಗ ಮತ್ತು ಟಿವಿ ನಟರಾಗಿ ಅಭಿಮಾನಿಗಳನ್ನು ರಂಜಿಸಿದ್ದ ಅವರು, 25ಕ್ಕೂ ಹೆಚ್ಚು ಚಲನಚಿತ್ರಗಳು, ಸರಿಸುಮಾರು 7 ಧಾರಾವಾಹಿಗಳಲ್ಲಿ ಅವರು ಅಭಿನಯಿಸಿದ್ದರು.

Exit mobile version