Home ತಾಜಾ ಸುದ್ದಿ ಬಸ್‌ಗೆ ಆಕಸ್ಮಿಕ ಬೆಂಕಿ

ಬಸ್‌ಗೆ ಆಕಸ್ಮಿಕ ಬೆಂಕಿ

0

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರ ದೇವಸ್ಥಾನದ ಮುಂಬಾಗದಲ್ಲಿಯೇ ಬಸ್‌ಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಭಸ್ಮವಾದ ಘಟನೆ ಮೇ.೧೭ ರಂದು ಮಧ್ಯಾಹ್ನ ನಡೆದಿದೆ.
ದೀಕ್ಷಾ ಟ್ರಾವೇಲ್ಸ್ ಸಂಸ್ಥೆಗೆ ಸೇರಿದ ಟೂರಿಸ್ಟ್ ಬಸ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡಕ್ಕೆ ತುತ್ತಾಗಿರುವ ಶಂಕೆ ವ್ಯಕ್ತವಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಬೆಂಕಿ ನಂದಿಸಿದೆ. ಘಟನೆಯಿಂದ ದೇವಳದ ಆವರಣದಲ್ಲಿ ಕೆಲಕಾಲ ಆತಂಕ ನಿರ್ಮಾಣವಾಗಿತ್ತು.

Exit mobile version