Home ನಮ್ಮ ಜಿಲ್ಲೆ ರಾಯಚೂರು ನಾಡನ್ನು ಸುಭಿಕ್ಷಗೊಳಿಸಲು ಪ್ರಾರ್ಥನೆ: ಸಿಎಂ

ನಾಡನ್ನು ಸುಭಿಕ್ಷಗೊಳಿಸಲು ಪ್ರಾರ್ಥನೆ: ಸಿಎಂ

0

ರಾಯಚೂರು: ಕನ್ನಡ ನಾಡು ಸುಭಿಕ್ಷವಾಗಿರಲು ಹಾಗೂ ನಾಡಿನ ಜನತೆಯ ಬದುಕು ಶಾಂತಿ ನೆಮ್ಮದಿ, ಸೌಹಾರ್ದತೆಯಿಂದ ಕೂಡಿರಲಿ ಎಂದು ಪ್ರಾರ್ಥಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮೀಜಿಗಳ ದರ್ಶನ ಪಡೆದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ರಾಯಚೂರು ಜಿಲ್ಲೆಗೆ ಬಂದಾಗ ಮಂತ್ರಾಲಯ ಕ್ಷೇತ್ರಕ್ಕೆ ಭೇಟಿ ನೀಡುವ ಪದ್ಧತಿಯಿದ್ದು ಶ್ರೀಮಠಕ್ಕೆ ಆಗಮಿಸಿ ಆಶೀರ್ವಾದವನ್ನು ಪಡೆಯಲಾಗಿದೆ ಎಂದರು.

Exit mobile version