Home ನಮ್ಮ ಜಿಲ್ಲೆ ರಾಯಚೂರು ರಾಯಚೂರು: ಕಿಡಿಗೇಡಿಯಿಂದ ಎರಡು ಬೈಕ್‌ಗಳಿಗೆ ಬೆಂಕಿ

ರಾಯಚೂರು: ಕಿಡಿಗೇಡಿಯಿಂದ ಎರಡು ಬೈಕ್‌ಗಳಿಗೆ ಬೆಂಕಿ

0
ರಾಯಚೂರು: ಕಿಡಿಗೇಡಿಯಿಂದ ಎರಡು ಬೈಕ್‌ಗಳಿಗೆ ಬೆಂಕಿ

ರಾಯಚೂರು: ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಕಿಡಿಗೇಡಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ನಗರದ ಎಲ್ ಬಿ ಎಸ್ ಲಾಲ್ ನಗರದ ಅಲಿ ಕಾಲೋನಿಯ ಮೆಕ್ಕಾ ಮಸೀದಿ ಬಳಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಬಡಾವಣೆಯ ನಿವಾಸಿಗಳಾದ ಲಾತಿಫ್ ಅಹ್ಮದ್, ಶಬ್ಬೀರ್ ಅಹ್ಮದ್ ಅವರ ಶೈನ್ ಹೊಂಡಾ ಆಕ್ಟಿವಾ ಬೈಕ್‌ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕ್ ಮಾಲೀಕರು ನೀಡಿದ ದೂರಿನ ಮೇರೆಗೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ರಾತ್ರಿಯೇ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕ್ರಮಕ್ಕೆ ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here