Home News ಹೃದಯಘಾತಕ್ಕೆ ಯುವತಿ ಸಾವು

ಹೃದಯಘಾತಕ್ಕೆ ಯುವತಿ ಸಾವು

ಸಾಂದರ್ಭಿಕ ಚಿತ್ರ

ದಾವಣಗೆರೆ : ಹೃದಯಘಾತಕ್ಕೆ ಒಳಗಾಗಿ ಯುವತಿ ಹೃದಯಘಾತಕ್ಕೆ ಸಾವನ್ನಪ್ಪಿದ ಘಟನೆ ನಡೆದಿದೆ.
ನಗರದ ಎಸ್. ಎಸ್. ಹೈಟೆಕ್ ರಸ್ತೆಯ ಸಾಯಿ ಬಾಬ ದೇವಸ್ಥಾನದ ಸಮೀಪದ ವಾಸಿ ತಿಪ್ಪೇಸ್ವಾಮಿ ಮತ್ತು ಆಶಾ ದಂಪತಿ ಪುತ್ರಿ ಗೌರಿ (19) ಹೃದಯಘಾತ ಸಂಭವಿಸಿ ಮೃತಪಟ್ಟ ದುರ್ದೈವಿ. ನಗರದ ಚಾಣಕ್ಯ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಪೂರ್ಣಗೊಳಿಸಿ ಎಂಜಿನಿಯರಿಂಗ್ ಸೇರಲು ಸಿಇಟಿ ಕೌನ್ಸಿಲಿಂಗ್‌ಗೆ ಕಾಯುತ್ತಿದ್ದರು. ಗೌರಿ ಮನೆಯುಲ್ಲಿ ಇದ್ದಾಗ ತಲೆ ಸುತ್ತು ಕಾಣಿಸಿಕೊಂಡಿದೆ. ಈ ವೇಳೆ ದಿಢೀರ್ ಕುಸಿದು ಸಾವು ಕಂಡಿದ್ದಾರೆ.

Exit mobile version