Home ಸಿನಿ ಮಿಲ್ಸ್ ಐಷಾರಾಮಿ ಕಾರುಗಳ ತೆರಿಗೆ ವಂಚನೆ: ಮಲಯಾಳಂ ಸ್ಟಾರ್‌ಗಳ ಮನೆಗಳ ಮೇಲೆ ಐಟಿ ದಾಳಿ!

ಐಷಾರಾಮಿ ಕಾರುಗಳ ತೆರಿಗೆ ವಂಚನೆ: ಮಲಯಾಳಂ ಸ್ಟಾರ್‌ಗಳ ಮನೆಗಳ ಮೇಲೆ ಐಟಿ ದಾಳಿ!

0

ಮಲಯಾಳಂ ಚಿತ್ರರಂಗದ ಖ್ಯಾತ ನಟರಾದ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಐಷಾರಾಮಿ ಕಾರುಗಳ ಖರೀದಿಯಲ್ಲಿ ತೆರಿಗೆ ವಂಚನೆ ಆರೋಪಕ್ಕೆ ಗುರಿಯಾಗಿದ್ದಾರೆ. ವಿದೇಶಗಳಿಂದ ದುಬಾರಿ ಕಾರುಗಳನ್ನು ತರಿಸಿಕೊಂಡು, ಅವುಗಳಿಗೆ ಪಾವತಿಸಬೇಕಾದ ತೆರಿಗೆಯನ್ನು ತಪ್ಪಿಸಿಕೊಳ್ಳಲು ಅಕ್ರಮ ಮಾರ್ಗಗಳನ್ನು ಅನುಸರಿಸಿದ್ದಾರೆ ಎಂಬ ಬಲವಾದ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ, ಕೇರಳ ರಾಜ್ಯದ ತೆರಿಗೆ ಇಲಾಖೆ ಅಧಿಕಾರಿಗಳು ಸೆಪ್ಟೆಂಬರ್ 22ರಂದು ಈ ನಟರು ಸೇರಿದಂತೆ ಸುಮಾರು 30 ಗಣ್ಯರ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ದೇಶದ ಹಲವು ಶ್ರೀಮಂತರು ವಿದೇಶಿ ಕಾರುಗಳನ್ನು ಭೂತಾನ್ ಮೂಲಕ ಭಾರತಕ್ಕೆ ತಂದು, ಕಡಿಮೆ ರಸ್ತೆ ತೆರಿಗೆ ಇರುವ ರಾಜ್ಯಗಳಲ್ಲಿ ನೋಂದಾಯಿಸಿಕೊಳ್ಳುತ್ತಾರೆ.

ನಂತರ ತಮ್ಮ ವಾಸಸ್ಥಾನದಲ್ಲಿ ಆ ಕಾರುಗಳನ್ನು ಬಳಸಿ, ತಮ್ಮ ರಾಜ್ಯಕ್ಕೆ ಸಲ್ಲಿಸಬೇಕಾದ ದೊಡ್ಡ ಮೊತ್ತದ ತೆರಿಗೆಯನ್ನು ವಂಚಿಸುತ್ತಾರೆ. ಇಂತಹ ಪ್ರಕರಣಗಳನ್ನು ಪತ್ತೆಹಚ್ಚಲು ಕೇಂದ್ರ ತೆರಿಗೆ ಇಲಾಖೆ ‘ನಮ್ಖೂರ್’ ಎಂಬ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ವಾಹನಗಳ ಖರೀದಿಯಲ್ಲಿ ನಡೆಯುವ ತೆರಿಗೆ ವಂಚನೆಯನ್ನು ಬಯಲಿಗೆಳೆಯುವ ಈ ಕಾರ್ಯಾಚರಣೆಯ ಕೇಂದ್ರಬಿಂದು ಪ್ರಸ್ತುತ ಕೇರಳವಾಗಿದೆ.

ಸ್ಮಗ್ಲಿಂಗ್ ಆರೋಪ; ಕಸ್ಟಮ್ಸ್ ದಾಳಿ: ತೆರಿಗೆ ವಂಚನೆಯ ಜೊತೆಗೆ, ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಸ್ಮಗ್ಲಿಂಗ್ ಆರೋಪವನ್ನೂ ಎದುರಿಸುತ್ತಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು ಈ ನಟರ ಮನೆಗಳ ಮೇಲೆ ದಾಳಿ ನಡೆಸಿ, ಅವರ ಕಾರುಗಳು ಮತ್ತು ಇತರೆ ವಿದೇಶಿ ವಸ್ತುಗಳ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಕೊಚ್ಚಿಯ ತೇವರದಲ್ಲಿರುವ ಪೃಥ್ವಿರಾಜ್ ಸುಕುಮಾರನ್ ಮನೆ, ಪನಂಪಿನ್ನಿ ನಗರದಲ್ಲಿರುವ ದುಲ್ಕರ್ ಸಲ್ಮಾನ್ ಮನೆ ಮತ್ತು ಪೃಥ್ವಿರಾಜ್ ಅವರ ತಿರುವನಂತಪುರಂ ನಿವಾಸದ ಮೇಲೂ ದಾಳಿ ನಡೆದಿದೆ.

ಆದರೆ ತಿರುವನಂತಪುರಂನಲ್ಲಿ ಯಾವುದೇ ವಿದೇಶಿ ವಾಹನ ಪತ್ತೆಯಾಗಿಲ್ಲ ಎನ್ನಲಾಗಿದೆ. ನಟರು ಮಾತ್ರವಲ್ಲದೆ, ಕೆಲವು ಉದ್ಯಮಿಗಳ ಮನೆಗಳ ಮೇಲೂ ಈ ‘ನಮ್ಖೂರ್’ ಕಾರ್ಯಾಚರಣೆಯ ಭಾಗವಾಗಿ ದಾಳಿ ಮಾಡಲಾಗಿದೆ. ‘ನಮ್ಖೂರ್’ ಎಂದರೆ ಮಲಯಾಳಂನಲ್ಲಿ ವಾಹನ ಎಂದರ್ಥ.

ಅಕ್ರಮ ಮಾರಾಟ ಜಾಲದ ಪತ್ತೆ: ಇತ್ತೀಚೆಗೆ ಕೇರಳ ಮತ್ತು ಇತರ ರಾಜ್ಯಗಳಲ್ಲಿ ಐಷಾರಾಮಿ ಕಾರುಗಳ ಅಕ್ರಮ ಮಾರಾಟ ಜಾಲ ಸಕ್ರಿಯವಾಗಿದೆ. ಭೂತಾನ್‌ನಿಂದ ಕಡಿಮೆ ಬೆಲೆಗೆ ವಿದೇಶಿ ಕಾರುಗಳನ್ನು ಖರೀದಿಸಿ, ಹಿಮಾಚಲ ಪ್ರದೇಶದಲ್ಲಿ ನಕಲಿ ವಿಳಾಸ ಮತ್ತು ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಿ, ನಂತರ ಈ ಕಾರುಗಳನ್ನು ಸಿನಿಮಾ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳಿಗೆ ಭಾರೀ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಕೇರಳದಲ್ಲಿ ಇಂತಹ ಕಾರುಗಳ ಮಾರಾಟ ಹೆಚ್ಚಾಗಿದ್ದು, ಇದೇ ಕಾರಣಕ್ಕೆ ಕಸ್ಟಮ್ಸ್ ಅಧಿಕಾರಿಗಳು ಸರಣಿ ದಾಳಿ ನಡೆಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version