Home ಸಿನಿ ಮಿಲ್ಸ್ Rangeela ಗೆ 3 ದಶಕದ ರಂಗು

Rangeela ಗೆ 3 ದಶಕದ ರಂಗು

0

‘ರಂಗೀಲಾ’ ಚಿತ್ರ ನವೆಂಬರ್ 28, 2025ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಮರುಬಿಡುಗಡೆ

90ರ ದಶಕದ ಐಕಾನಿಕ್ ಮ್ಯೂಸಿಕಲ್ ಬ್ಲಾಕ್‌ಬಸ್ಟರ್ ‘ರಂಗೀಲಾ’ ಸಿನಿಮಾ 30 ವರ್ಷಗಳನ್ನು ಪೂರೈಸಿಕೊಂಡಿದೆ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಈ ಚಿತ್ರವು ಮೊದಲ ಬಾರಿಗೆ 1995ರ ಸೆಪ್ಟೆಂಬರ್ 8ರಂದು ಬಿಡುಗಡೆಯಾಗಿದ್ದು, ಅದರಿಂದ ಹಿಡಿದು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ವಿಶೇಷ ಸ್ಥಾನಮಾನ ಹೊಂದಿದೆ. ಆಮೀರ್ ಖಾನ್, ಊರ್ಮಿಳಾ ಮಟೋಂಡ್ಕರ್ ಮತ್ತು ಜಾಕಿ ಶ್ರಾಫ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.

ಈ ಸಂದರ್ಭವನ್ನು ಸ್ಮರಣೀಯಗೊಳಿಸಲು, ನಿರ್ಮಾಣ ತಂಡವು 4K ಮರುಸ್ಥಾಪಿತ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ‘ರಂಗೀಲಾ’ ಚಿತ್ರವನ್ನು ನವೆಂಬರ್ 28, 2025ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಮಾಡಲು ಸಿದ್ದವಾಗಿದೆ. 30 ವರ್ಷಗಳ ನಂತರ ಮತ್ತೆ ದೊಡ್ಡ ಪರದೆಯಲ್ಲಿ ರಂಗೀಲಾ ವೀಕ್ಷಿಸಲು ಅವಕಾಶ ದೊರಕುತ್ತಿರುವುದು ಸಿನಿಪ್ರೇಮಿಗಳಿಗೆ ಸಂತಸದ ವಿಷಯವಾಗಿದೆ.

‘ರಂಗೀಲಾ’ ತನ್ನ ಬಿಡುಗಡೆ ಸಮಯದಲ್ಲಿ ಭಾರತದ ನಾಲ್ಕನೇ ಅತ್ಯಧಿಕ ಸಂಗ್ರಹ ಮಾಡಿದ ಚಿತ್ರ ಎಂದು ದಾಖಲೆಯಾಯಿತು. ವಿಶೇಷವಾಗಿ, ಚಿತ್ರಕ್ಕೆ ಎ.ಆರ್. ರೆಹಮಾನ್ ನೀಡಿರುವ ಸಂಗೀತ ಭಾರತೀಯ ಸಿನೀ ಸಂಗೀತಕ್ಕೆ ಹೊಸ ಧ್ವನಿಯನ್ನೇ ತಂದಿತ್ತು. ಚಿತ್ರದ ಹಲವು ಹಾಡುಗಳು ಇಂದಿಗೂ ಜನಪ್ರಿಯವಾಗಿವೆ.

30 ವರ್ಷಗಳ ಈ ಸಂಭ್ರಮಾಚರಣೆಯಲ್ಲಿ, ಸಿನಿಪ್ರೇಮಿಗಳು ಮತ್ತೆ ದೊಡ್ಡ ಪರದೆಯಲ್ಲಿ ಸಂಗೀತ, ನೃತ್ಯ, ಕಥೆ ಮತ್ತು ನೆನಪುಗಳ ಜಾತ್ರೆಯನ್ನು ಅನುಭವಿಸಲು ಸಿದ್ಧರಾಗುತ್ತಿದ್ದಾರೆ. ರಂಗೀಲಾ ಮರುಬಿಡುಗಡೆಯಿಂದ 90ರ ದಶಕದ ಸುವರ್ಣಯುಗ ಸಿನಿಪರದೆಯ ಮೆಲೆ ಮೂಡಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version