Home ನಮ್ಮ ಜಿಲ್ಲೆ ಮೈಸೂರು ಸಿಎಂ ಸಿದ್ದರಾಮಯ್ಯ ಗೃಹಪ್ರವೇಶ: ಯಾರಿಗೂ ಆಹ್ವಾನವಿಲ್ಲ!

ಸಿಎಂ ಸಿದ್ದರಾಮಯ್ಯ ಗೃಹಪ್ರವೇಶ: ಯಾರಿಗೂ ಆಹ್ವಾನವಿಲ್ಲ!

0

ಮೈಸೂರು: ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹೊಸ ಮನೆಯ ಗೃಹಪ್ರವೇಶ ಡಿಸೆಂಬರ್‌ನಲ್ಲಿ  ನಡೆಯಲಿದ್ದು  ಕುಟುಂಬಸ್ಥರನ್ನು ಹೊರತುಪಡಿಸಿ ಯಾರನ್ನು ಆಹ್ವಾನಿಸುವುದಿಲ್ಲ ಎಂದು  ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿಸೆಂಬರ್‌ನಲ್ಲಿ  ಗೃಹ ಪ್ರವೇಶ ಮಾಡಲಾಗುವುದು. ಮಾಧ್ಯಮದವರನ್ನು ಆಹ್ವಾನಿಸುವುದಿಲ್ಲ. ಒಂದು ವೇಳೆ ಬಂದರು ಬೇಡ ಎಂದು ಕಳುಹಿಸುತ್ತೇನೆ. ಮನೆಯ ಕೆಲಸ ಬಹುತೇಕ ಮುಕ್ತಾಯವಾಗಿದೆ. ನಾನು ಈಗ ಇರುವ ಮನೆ ನನ್ನದಲ್ಲ, ಮರಿಸ್ವಾಮಿ ಅವರದ್ದು.

ಮರಿಸ್ವಾಮಿಯೇ ನನಗೆ ಹಾಗೂ ನನ್ನ ಮಗನಿಗೆ ಅನ್ನದಾತ. ಗೃಹ ಪ್ರವೇಶ ಆದ ಮೇಲೆ ಹೊಸ ಮನೆಗೆ ಹೋಗುತ್ತೇನೆ.  ಬರೀ ಕುಟುಂಬಸ್ಥರು ಮಾತ್ರ ಗೃಹ ಪ್ರವೇಶಮಾಡಿಕೊಳ್ಳುತ್ತೇವೆ.  ಹಾಲಿ ಇರುವ ಮನೆಯನ್ನ ಮರಿಸ್ವಾಮಿ ಖಾಲಿ ಇಟ್ಟರೆ ಜನರನ್ನ ಭೇಟಿ ಮಾಡಲು  ಬಳಸಿಕೊಳ್ಳುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಿಗದಿತ ಅವಧಿಯೊಳಗೆ ಗಣತಿ ಪೂರ್ಣ: ಮೂರುವರೆ ಕೋಟಿ ಜನರ ಗಣತಿಯಾಗಿದೆ.  ನಿಗದಿಂತ ಅವಧಿಯೊಳಗೆ  ಗಣತಿ ಪೂರ್ಣಗೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿ,  ಇನ್ನೂ ಮರ‍್ನಾಲ್ಕು ದಿನಗಳ  ಕಾಲಾವಕಾಶ ಇದೆ.

ಅಷ್ಟರೊಳಗೆ ರಾಜ್ಯದ ಒಂದುವರೆ ಕೋಟಿ ಮನೆಯ ಗಣತಿ ಆರಂಭದ ಮೂರು ದಿನ ತಾಂತ್ರಿಕ ದೋಷದಿಂದ ಸ್ವಲ್ಪ ಸಮಸ್ಯೆಯಾಗಿತ್ತು. ಈಗ ಯಾವುದೇ ಸಮಸ್ಯೆ ಇಲ್ಲ.  ಒಂದು ವೇಳೆ ಪೂರ್ಣಗೊಳ್ಳದಿದ್ದರೆ ನಂತರ ಮುಂದೆ ಏನು ಮಾಡಬೇಕೆಂಬ  ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ತೆರಿಗೆ ರಾಜ್ಯದ ಪಾಲು ನೀಡದಿದ್ದರೆ ಕೋರ್ಟ್ಗೆ: ರಾಜ್ಯಕ್ಕೆ ತೆರಿಗೆ  ಹಣ  ನೀಡುವ ವಿಚಾರದಲ್ಲಿ  ಕೇಂದ್ರ ತಾರತಮ್ಯ ಮಾಡುತ್ತಿದೆ. ನಮ್ಮ ಪಾಲು  ಕೊಡದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು. ರಾಜ್ಯಕ್ಕೆ ಮೊದಲಿನಿಂದಲೂ ಕೇಂದ್ರದಿಂದ ಅನ್ಯಾಯವಾಗುತ್ತಿದೆ.

ರಾಜ್ಯದಿಂದ ಕೊಟ್ಟಿದ್ದನ್ನು ನ್ಯಾಯ ಸಮ್ಮತವಾಗಿ ನಮಗೆ ವಾಪಸ್ ಕೊಡಿ ಎಂದು ಕೇಳುವುದು ತಪ್ಪು  ಎನ್ನುವಂತೆ  ಬಿಂಬಿಸಲಾಗುತ್ತಿದೆ. ಉದ್ದೇಶ ಪೂರ್ವಕವಾಗಿಯೇ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದೆ. ಅಗತ್ಯವಿದ್ದರೆ  ನ್ಯಾಯಾಲಯದ ಮೆಟ್ಟಿಲು ಏರಿ ನಮ್ಮ ಪಾಲು ನಾವು ಪಡೆಯುವುದಾಗಿ  ತಿಳಿಸಿದರು.

ರಾಜ್ಯದ ಬಿಜೆಪಿ ಸಂಸದರು ಸಚಿವರುಈ ವಿಚಾರದಲ್ಲಿ ಮೋದಿ ಮುಂದೆ ಮಾತನಾಡುವುದಿಲ್ಲ. ಮೋದಿಯನ್ನ ಹೊಗುಳುವುದು ಅಷ್ಟೇ ಕೆಲಸ. ನಾವು ಕಡಿಮೆ ಮಾಡದನ್ನ ಸ್ವಾಗತಿಸಬೇಕು ನಷ್ಟವನ್ನ ನಾವೇ ಅನುಭವಿಸಬೇಕು. ೮ ವರ್ಷ ಕೇಂದ್ರ ಸರ್ಕಾರ ಅತಿ ಹೆಚ್ಚು ಜಿಎಸ್ ಟಿ ವಸೂಲಿ ಮಾಡಿದೆ.

ಆ ಹಣವನ್ನ ಈಗ ವಾಪಸ್ ಕೊಡಲಾಗುತ್ತಿದೆ. ಜಾಸ್ತಿ ಮಾಡುವುದು ಇವರೇ, ಕಡಿಮೆ ಮಾಡುವುದು ಇವರೇ. ಇದರಲ್ಲಿ ಯಾವ ದೊಡ್ಡತನವೂ ಇಲ್ಲ. ಇದರಲ್ಲಿ ಬೆನ್ನು ತಟ್ಟಿಕೊಳ್ಳುವಂತದ್ದು ಏನಿದೆ. ಇನ್ನಯಾರದ್ದು ಚುನಾವಣೆ ಗೋಸ್ಕರ ಸರ್ಕಾರ ಈ ನಿರ್ಧಾರ ಮಾಡಿದೆ ಎಂದು ಛೇಡಿಸಿದರು.

ಅಶೋಕ್‌ಗೆ ಏಕಚನದಲ್ಲಿ ತಿರುಗೇಟು ನೀಡಿದ ಸಿಎಂ: ಪ್ರತಿ ನಿತ್ಯ ಆರ್‌ಎಸ್‌ಎಸ್ ನಾಯಕರು ಬರೆದುಕೊಡುವುದನ್ನು  ಹೇಳುವ ಅಶೋಕನಿಗೆ ರಾಜ್ಯದ ಸಮಸ್ಯೆ ಏನು ಗೊತ್ ರಿ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು. ಅವನಿಗೆ ರೈತನ ಸಮಸ್ಯೆ ನಾಡಿನ ಸಮಸ್ಯೆ ಏನು ಗೊತ್ತು. ಸುಮ್ಮನ್ನ ವಿಪಕ್ಷ ನಾಯಕ ಮಾಡಿದ್ದಾರೆ ಆಗಿದ್ದಾನೆ ಅಷ್ಟೇ ಎಂದು ಏಕವಚನದಲ್ಲಿ   ಹೇಳಿದರು.

NO COMMENTS

LEAVE A REPLY

Please enter your comment!
Please enter your name here

Exit mobile version