Home ನಮ್ಮ ಜಿಲ್ಲೆ ಮೈಸೂರು ಹುಲಿ Vs. ಸರ್ಕಾರ: ಕಾಡಂಚಿನ ಗ್ರಾಮಗಳ ರಕ್ಷಣೆಗೆ ‘ತಡೆಗೋಡೆ’ ಅಸ್ತ್ರ, ಸಿಎಂ ಮಹತ್ವದ ಘೋಷಣೆ!

ಹುಲಿ Vs. ಸರ್ಕಾರ: ಕಾಡಂಚಿನ ಗ್ರಾಮಗಳ ರಕ್ಷಣೆಗೆ ‘ತಡೆಗೋಡೆ’ ಅಸ್ತ್ರ, ಸಿಎಂ ಮಹತ್ವದ ಘೋಷಣೆ!

0

ಮೈಸೂರು: ಪ್ರಾಣಿಗಳಿಂದ ದಾರಿಯಲ್ಲಿ ಸಂಚರಿಸುವು ವಾಹನ, ಮನುಷ್ಯರ ಮೇಲೆ ದಾಳಿ ಹೆಚ್ಚಾಗಿತ್ತು. ಇದೆ ಕಾರಣಕ್ಕೆ ಕೆಲವು ಸ್ಥಳಗಳ ಪ್ರವೇಶವನ್ನೆ ಬಂದ ಕೊಡ ಮಾಡಲಾಗಿತ್ತು. ಹಸಿವಿನ ದಾಹದಿಂದ ಹುಲಿಗಳು ಆಹಾರಕ್ಕೆ ಬೀದಿಯಲ್ಲಿ ಕಾಣಿಸುವುದು, ಜೊತೆಗೆ ಗ್ರಾಮಗಳಿಗೆ ನುಗ್ಗುತ್ತವೆ.

ಈ ಹುಲಿ ದಾಳಿ ತಡೆಯಲು ವೈಜ್ಞಾನಿಕ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ. ಅಧಿಕಾರಿಗಳು ಜನರ ಸಮಸ್ಯೆ ಆಲಿಸಿ, ಸ್ಥಳೀಯವಾಗಿಯೇ ಪರಿಹರಿಸುವಂತೆ ಸೂಚಿಸಿದ್ದಾರೆ.

ನಿನ್ನೆ ಸಂಭವಿಸಿದ ದೆಹಲಿಯ ಕೆಂಪುಕೋಟೆ ಬಳಿ ನಡೆದ ಬಾಂಬ್ ದಾಳಿಯಿಂದ ಜನರಲ್ಲಿ ಭಯವನ್ನುಂಟು ಮಾಡಿದೆ. ಹಾಗೇ ಮೈಸೂರು ಜಿಲ್ಲೆಯಲ್ಲಿ ದಿನೆ ದಿನೇ ಹುಲಿ ದಾಳಿಯು ಹೆಚ್ಚಾಗುತ್ತಿದೆ. ಹಾನಿಗಳಿಂದ ಸುರಕ್ಷತೆ ಪಡಿಯಲು ಹುಲಿ ದಾಳಿ ಪ್ರಕರಣಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ. ಕೇಂದ್ರ ಸ್ಥಾನದಲ್ಲೇ ವಾಸಿಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಬಾಂಬ್ ಬ್ಲಾಸ್ಟ್ ಆಗಲೇಬಾರದಿತ್ತು. ಎಷ್ಟೂ ಜನ ಅಮಾಯಕರು ಬಲಿಯಾಗಿದ್ದಾರೆ. ಪತ್ರಿಕೆಗಳಲ್ಲಿ ಮೂರು ಜನ,‌ ಎಂಟು ಜನ ಎಂದು ಬರೆದಿದ್ದಾರೆ. ಸಾವು ಸಾವುಗಳೇ, ಆ ಘಟನೆ ನಡೆಯಬಾರದು. ಇದು ನಿಜಕ್ಕೂ ಆಘಾತವನ್ನುಂಟು ಮಾಡಿದೆ.

ದೆಹಲಿಯ ಕೆಂಪುಕೋಟೆ ಬಳಿಯೇ ಬಾಂಬ್‌ ದಾಳಿ ನಡೆದಿದೆ. ಈ ಕುರಿತಂತೆ ನಾನು ಮಾಹಿತಿ ಕಲೆ ಹಾಕ್ತೀದ್ದೀನಿ. ಬಿಹಾರ ಚುನಾವಣೆ ವೇಳೆಯೇ ಇಂತಹ ಘಟನೆ ಸಂಭವಿಸಿದೆ. ಬಾಂಬ್ ದಾಳಿ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕಾಂಗ್ರೆಸ್ ಪರವಾಗಿ ಇದು ವರ್ಕ್ ಆಗಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಹಾಗೇ ಮೈಸೂರಿನ ಹುಲಿ ದಾಳಿಗಳ ಬಗ್ಗೆಯು ಸಿದ್ದರಾಮಯ್ಯ ಮಾತನಾಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮೂರು ಜನ ಹುಲಿ ದಾಳಿಯಿಂದ ಮೃತರಾಗಿದ್ದಾರೆ. ಹುಲಿಗಳು, ಆನೆಗಳ ಸಂಖ್ಯೆ ಹೆಚ್ಚಾಗಿದೆ.

ಅರಣ್ಯಾಧಿಕಾರಿಗಳು ಕೊಡುವ ಉತ್ತರದಿಂದ ನನಗೆ ಸಮಾಧಾನವಿಲ್ಲ. ಕಾಡಿನೊಳಗೆ ನೀರು, ಮೇವು ಸಮೃದ್ಧವಾಗಿ ಸಿಗಬೇಕು. ಲ್ಯಾಂಟೆನ ಹೆಚ್ಚಾಗಿ ಕಾಡಿನಲ್ಲಿ ಬೆಳೆದಿದೆ. ಇದನ್ನೆಲ್ಲ ಕ್ಲೀನ್ ಮಾಡಿ, ಕೆರೆ, ಗುಂಡಿಗಳಲ್ಲಿ‌ ನೀರು ಸಿಗಬೇಕು. ಇವೆಲ್ಲವನ್ನ ಕಟ್ಟು ನಿಟ್ಟಾಗಿ ಮಾಡಲೇಬೇಕು ಎಂದು ಸೂಚಿಸಿದೆನೆ ಎಂದಿದ್ದಾರೆ.

ಹುಲಿ ದಾಳಿಗೆ ವೈಜ್ಞಾನಿಕ ಕಾರಣ ಹುಡುಕಲು ರಾಜ್ಯಮಟ್ಟದ ಸಭೆ ಮಾಡುತ್ತೇನೆ. ಮುಂದಿನ ವಾರ ಅರಣ್ಯಸಚಿವರು, ಅಧಿಕಾರಿಗಳ ಜೊತೆ ಸಭೆ ನಡೆಸುವೆ. ರೈಲ್ವೆ ಬ್ಯಾರಿಕೇಡ್ ಎಲ್ಲಾ ಕಡೆ ಮಾಡಿಲ್ಲ. ಬಿಜೆಪಿ ಸರ್ಕಾರದವರು ಇದನೆಲ್ಲ ನಿಲ್ಲಿಸಿಬಿಟ್ಟಿದರು. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಸೇರಿ ಎಲ್ಲರ ಜೊತೆಗೆ ಒಂದು ಸಭೆ ಕರೆದು ಮೀಟಿಂಗ್ ಮಾಡಿ ಬಳಿಕ ಕಂಡಿತವಾಗಿಯು ಇದಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೆ ಎಂದರು.

ಪ್ರಾಣಿಗಳು ಇರುವಂತಹ ಪ್ರದೇಶದಲ್ಲಿ ಎಷ್ಟೇ ಮುನ್ನಸೂಚನೆ ಕ್ರಮ, ಹಾಗೂ ಕಾವಲುಗಾರರನ್ನ ಇಟ್ಟರು ಸರಿಯಾದ ಆಹಾರ ಸಿಗದ ಕಾರಣಕ್ಕೆ ಎಲ್ಲ ಹಾಳು ಮಾಡಿ ಬಂದೆ ಬರುತ್ತವೆ. ಆದರು ಇದಲ್ಲವನ್ನ ತಡೆಯುವಂತ ಕಾರ್ಯ ಕ್ರಮಗಳನ್ನ ಕೈಗೂಳ್ಳುತ್ತೆ ಎಂದು ಸಿಎಂ ತಿಳಿಸಿದರು.

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ವಾಸ ಮಾಡಬೇಕು, ಇದನ್ನ ಬಿಟ್ಟು ಬೇರೆ ಬೇರೆ ಸ್ಥಾನಗಳಲ್ಲಿ ವಾಸ ಮಾಡುವುದು ಸರಿ ಅಲ್ಲ ಎಂದು ಗ್ರಾ.ಪಂ ಪಿಡಿಓ ಅಧಿಕಾರಿಗಳು, ತಾಲ್ಲೂಕು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್‌ಕೊಟ್ಟಿದ್ದಾರೆ. ಸರಿಯಾದ ರೀತಿಯಲ್ಲಿ ಕೆಲಸ ಮಾಡದಿರುವ ಅಧಿಕಾರಿಗಳ ವಿರುದ್ದ ಸೂಕ್ತವಾದ ಕಾನೂನು ಕ್ರಮ ಜರುಗಿಸುತ್ತೆವೆ ಎಂದಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version