ದುಬೈ: ಬಹುನಿರೀಕ್ಷಿತ ಏಷ್ಯಾಕಪ್ ಭಾರತದ ಮುಡಿಗೇರಿದೆ. ಆಪರೇಷನ್ ಸಿಂದೂರದ ಮೂಲಕ ಪಾಕ್‌ಗೆ ಏಟು ನೀಡಿದ್ದ ಭಾರತ ಈಗ ಏಷ್ಯಾಕಪ್ ಗೆಲ್ಲುವ ಮೂಲಕ ಮತ್ತೊಂದು ಆಘಾತ ನೀಡಿದೆ.
ಭಾನುವಾರದ ಮಧ್ಯರಾತ್ರಿ ದೇಶದಲ್ಲೆಡೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಸೂಪರ್ 4 ಹಂತದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಎದುರಾಳಿ ತಂಡ ನಮಗೆ ಲೆಕ್ಕಕ್ಕೇ ಇಲ್ಲ ಎಂದಿದ್ದ ಸೂರ್ಯಕುಮಾರ್ ಯಾದವ್ ಅವರ ಮುಂದಾಳತ್ವದ ಪಡೆ, ಪಾಕ್ ವಿರುದ್ಧ ಸುಲಭ ಗೆಲುವು ಸಾಧಿಸಿ 9ನೇ ಬಾರಿ ಏಷ್ಯಾಕಪ್ ತನ್ನದಾಗಿಸಿಕೊಂಡಿದೆ.
ಸತತ ಮೂರು ಭಾನುವಾರಗಳಲ್ಲಿ ಮೂರು ಬಾರಿ ಮುಖಾಮುಖಿಯಾಗಿದ್ದ ಇಂಡೋ-ಪಾಕ್ ಕದನದಲ್ಲಿ ಬದ್ಧವೈರಿಗೆ ಪದೇ ಪದೆ ಅವಮಾನವಾಗಿದೆ. ಸೆಪ್ಟೆಂಬರ್ 14ರ ಏಷ್ಯಾಕಪ್ ಲೀಗ್ ಹಂತ, ಸೆಪ್ಟೆಂಬರ್ 21ರಂದು ಸೂಪರ್ 4 ಹಂತ ಹಾಗೂ ಸೆಪ್ಟೆಂಬರ್ 28 ರಂದು ನಡೆದ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಎದುರಾಳಿ ಪಾಕ್ ತಂಡವನ್ನು ಸೋಲಿಸಿದೆ. ಈ ಮೂರು ಪಂದ್ಯಗಳಲ್ಲಿ ಭಾರತ ಚೇಸ್ ಮಾಡಿ ಗೆದ್ದಿರುವುದು ವಿಶೇಷ. ಭಾರತದ ಪರ ಬೌಲಿಂಗ್‌ನಲ್ಲಿ ಸ್ಪಿನ್ನರ್‌ಗಳಾದ ಕುಲ್‌ದೀಪ್ ಯಾದವ್‌ನ ಕೈಚಳಕ, ವರುಣ್ ಚಕ್ರವರ್ತಿ ಹಾಗೂ ಅಕ್ಷರ್ ಪಟೇ ಲ್‌ರ ಮ್ಯಾಜಿಕ್ ಒಂದೆಡೆಯಾದರೆ, ಬ್ಯಾ ಟಿಂಗ್‌ನಲ್ಲಿ ತಿಲಕ್ ವರ್ಮಾರ ಅಮೋಘ 69 ರನ್‌ಗಳ ಕಾಣಿಕೆಯಿಂದ ಪಾಕ್‌ನ ಕನಸುಗಳೆಲ್ಲಾ ನುಚ್ಚುನೂರಾಗಿದೆ. 147 ರನ್‌ಗಳನ್ನು ಬೆನ್ನಟ್ಟಿದ ಭಾರತಕ್ಕೆ ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ವೈಫಲ್ಯದ ನಂತರವೂ ಸೋತಿದ್ದು ಪಾಕಿಗಳಿಗೆ ನುಂಗಲಾರದ ಬಿಸಿತುಪ್ಪವಾಗಿದೆ.
ಬಿಸಿಸಿಐನಿಂದ 21 ಕೋಟಿ: ಈ ಬಾರಿ ಏಷ್ಯಾಕಪ್ ಗೆಲುವಿನ ಬಳಿಕ ಬಿಸಿಸಿಐ ಭಾರತಕ್ಕೆ ಬಹುಮಾನ ಘೋಷಿಸಿದ್ದು ಆಟಗಾರರು, ಕೋಚ್‌ಗಳಿಗೆ ಒಟ್ಟು 21 ಕೋಟಿ ರೂ. ನೀಡಲಿದೆ.
ಏಷ್ಯಾಕಪ್ ನಲ್ಲಿ ಅತಿ ಹೆಚ್ಚು ವಿಕೆಟ್‌ಗಳು
ಕುಲದೀಪ್ ಯಾದವ್: 18 ಪಂದ್ಯ – 36 ವಿಕೆಟ್
ಲಸಿತ್ ಮಾಲಿಂಗ: 15 ಪಂದ್ಯ – 33 ವಿಕೆಟ್
ಮುತ್ತಯ್ಯ ಮುರಳೀಧರನ್: 24 ಪಂದ್ಯ-30 ವಿಕೆಟ್
ರವೀಂದ್ರ ಜಡೇಜಾ: 26 ಪಂದ್ಯ – 29 ವಿಕೆಟ್
ಟ್ರೋಫಿ ತೆಗೆದುಕೊಳ್ಳಲು ವಿರೋಧ: ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತ ಪಡೆ ವಿರೋಧಿಸಿತು. ಇದರಿಂದ ಪ್ರಶಸ್ತಿ ಪ್ರಧಾನ ಸಮಾರಂಭ ತಡವಾಗಿದ್ದು, ಐಸಿಸಿ ಅಧಿಕಾರಿಗಳು ಮನವೊಲಿಸುವ ಯತ್ನ ಮಾಡಿದರು.
ಸ್ಕೋರ್ ವಿವರ:
ಪಾಕಿಸ್ತಾನ 19.1 ಓವರ್‌ನಲ್ಲಿ 146 ರನ್
ಶಹಬ್ಜಾದಾ ಫರ್ಹನ್ 57 (38)
ಫಖರ್ ಜಮಾನ್ 46 (35)
ಸಯೀಂ ಅಯೂಬ್ 14 (11)
ಎಂ. ಹ್ಯಾರೀಸ್ 00 (02)
ಸಲ್ಮಾನ್ ಅಘಾ 08 (07)
ಹುಸೇನ್ ತಲತ್ 01 (02)
ಎಂ. ನವಾಜ್ 06 (09)
ಶಾಹೀನ್ ಅಫ್ರಿದಿ 00 (೦3)
ಫಹೀಮ್ ಅಶ್ರಫ್ 00 (೦2)
ಹ್ಯಾರೀಸ್ ರೌಫ್ 06 (04)
ಅಬ್ರಾರ್ ಅಹ್ಮದ್ 01 (02)
ಭಾರತ 19.4 ಓವರ್‌ಗಳಲ್ಲಿ 150/5
ಅಭಿಷೇಕ್ ಶರ್ಮಾ 05(06)
ಶುಭಮನ್ ಗಿಲ್ 12(10)
ಸೂರ್ಯಕುಮಾರ್ 01(05)
ತಿಲಕ್ (ಅಜೇಯ) 69(53)
ಸಂಜು ಸ್ಯಾಮ್ಸನ್ 24 (21)
ಶಿವಂ ದುಬೆ 33 (22)
ರಿಂಕು ಸಿಂಗ್ (ಅಜೇಯ) 04 (01)