Home ನಮ್ಮ ಜಿಲ್ಲೆ ದಾವಣಗೆರೆ: ಮಕ್ಕಳ ಸುಪರ್ದಿಗಾಗಿ ಪತ್ನಿಗೆ 20 ಬಾರಿ ಚಾಕು ಇರಿದ ಪತಿ!

ದಾವಣಗೆರೆ: ಮಕ್ಕಳ ಸುಪರ್ದಿಗಾಗಿ ಪತ್ನಿಗೆ 20 ಬಾರಿ ಚಾಕು ಇರಿದ ಪತಿ!

0

ದಾವಣಗೆರೆ: ಕಲೀಂವುಲ್ಲಾ ಮತ್ತು ಮುಸ್ಕಾನ್ ಇವರಿಬ್ಬರು ದಾವಣಗೆರೆ ತಾಲ್ಲೂಕಿನ ಕಾಡಜ್ಜಿ ಗ್ರಾಮದ ನಿವಾಸಿಗಳು. ಕಳೆದ ಐದು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದರು. ಪತ್ನಿಯ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದ ಪತಿರಾಯ, ಮಕ್ಕಳು ಪತ್ನಿಯ ಪಾಲಾಗಬಹುದೆನ್ನುವ ಆತಂಕದಲ್ಲಿ ಪತ್ನಿಯನ್ನು ಸುಮಾರು 20 ಬಾರಿ ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ನಗರದ ಎಂಸಿಸಿಬಿ ಬ್ಲಾಕಿನಲ್ಲಿರುವ ಬಾಲ ಮಂದಿರದ ಆವರಣದಲ್ಲಿ ನಡೆದಿದೆ.

ಆದರೆ, ಮುಸ್ಕಾನಾ  ಬೇರೊಬ್ಬ ಪುರುಷನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಪತಿ ಕಲೀಂವುಲ್ಲಾಗೆ ಸಂಶಯವಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಆಕೆಯೊಂದಿಗೆ ಜಗಳವಾಡಿದ್ದ. ಹಿರಿಯರೊಂದಿಗೆ ಪಂಚಾಯಿತಿ ನಡೆಸಿದ್ದ. ಈತನ ಮಾತುಗಳನ್ನು ಯಾರೂ ನಂಬದೇ ಇರುವುದರಿಂದ ಕಲೀಂವುಲ್ಲಾ ಮಲಗುವ ಕೋಣೆಯಲ್ಲಿ ಗೊತ್ತಾಗದಂತೆ ಸಿಸಿ ಕ್ಯಾಮರಾ ಅಳವಡಿಸಿ, ಪತ್ನಿಯ ರಾಸಲೀಲೆ ಕ್ಯಾಮರಾದಲ್ಲಿ ಸೆರೆಯಾಗಿರುವ ಸಾಕ್ಷ್ಯ ನೀಡಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದನು.

ಆದರೆ ಇಬ್ಬರು ಮಕ್ಕಳು ತನ್ನೊಂದಿಗೆ ಇರಬೇಕು ಎಂದು ಕಲೀಂವುಲ್ಲಾ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದ. ಇದರಿಂದ ಹಿರಿಯರ ಸಮ್ಮುಖದಲ್ಲಿ ಒಂದು ಮಗುವನ್ನು ತಂದೆ ಜೊತೆ ಇನ್ನೊಂದು ಮಗುವನ್ನು ತಾಯಿ ಜೊತೆ ಇರುವಂತೆ ತೀರ್ಮಾನ ಮಾಡಿದ್ದರು. ಆದರೆ ಮುಸ್ಕಾನ್ ಮಾತ್ರ ಇಬ್ಬರು ಮಕ್ಕಳನ್ನು ತನ್ನೊಟ್ಟಿಗೆ ಕರೆದುಕೊಂಡು ಹೋಗಿದ್ದಳು.

ಇದರಿಂದ ಮುಸ್ಕಾನ್ ಮಂಗಳವಾರ ದಾವಣಗೆರೆಯ ಎಂಸಿಸಿಬಿ ಬ್ಲಾಕ್ ನಲ್ಲಿದ್ದ ಬಾಲ ನ್ಯಾಯ ಮಂದಿರಕ್ಕೆ ಇಬ್ಬರನ್ನು ಕೌನ್ಸಲಿಂಗ್ ಕರೆದಿದ್ದರು.‌ ಅಲ್ಲಿ ಮಕ್ಕಳು ಪತ್ನಿಯ ಸುಪರ್ದಿಗೆ ಹೋಗಬಾರದು ಎನ್ನುವ ಕಾರಣಕ್ಕೆ ಕಲೀಂವುಲ್ಲಾ ತನ್ನ ಪತ್ನಿಗೆ ಚಾಕುವಿನಿಂದ ಇಪ್ಪತ್ತು ಬಾರಿ ಇರಿದಿದ್ದು, ಇದನ್ನು ಬಿಡಿಸಲು ಬಂದ ಪತ್ನಿಯ ತಾಯಿಗೂ ಕೂಡ ಚಾಕುವಿನಿಂದ ಇರಿದಿದ್ದಾನೆ.

ಕೂಡಲೇ ಇಬ್ಬರನ್ನು ಬಡಾವಣೆ ಪೊಲೀಸರು ಜಿಲ್ಲಾಸ್ಪತ್ರೆಗೆ ಸೇರಿಸಿ ಆರೋಪಿಯನ್ನು ಬಂಧನ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಮುಸ್ಕಾನ್ ಸಾವನ್ನಪ್ಪಿದರೆ, ಅತ್ತೆ ಪರ್ಜಾನ್ ಭಾನು ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಲ್ಲದೆ ಕಲೀಂವುಲ್ಲಾ ವಿರುದ್ದ ದಾವಣಗೆರೆ ಗ್ರಾಮಾಂತರ ಹಾಗು ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ನಿ ಹಾಗು ಆಕೆಯ ತಾಯಿ ದೂರು ದಾಖಲಿಸಿ ಕಿರುಕುಳ ನೀಡುತ್ತಿದ್ದಂತೆ. ಇದರಿಂದ ದುಡುಕಿ ಈ ಕೃತ್ಯವೆಸಗಿದ್ದಾನೆ ಎಂದು ಆತನ ಸಂಬಂಧಿಕರು ಹೇಳುತ್ತಿದ್ದಾರೆ.

ಇತ್ತ ಚಾಕು ಇರಿತಕ್ಕೆ ಒಳಗಾದ ಕಲೀಂವುಲ್ಲಾ ಅತ್ತೆ ಹೇಳೋದೇ ಬೇರೆ. ನನ್ನ ಮಗಳ ಮೇಲೆ ಸುಖಾಸುಮ್ಮನೆ ಅನುಮಾನ ಪಡುತ್ತಿದ್ದಾ. ಅಲ್ಲದೇ ಅವನ ಸ್ನೇಹಿತನನ್ನು ಬಿಟ್ಟು ನಮ್ಮ ಮಗಳ ಮೇಲೆ ಅತ್ಯಾಚಾರ ಮಾಡಿಸಿದ್ದಾನೆ. ಇದನ್ನು ವೀಡಿಯೋ ಮಾಡಿಕೊಂಡು ಹೆದರಿಸುತ್ತಿದ್ದ ಎಂದು ಮಗಳನ್ನು ತಾಯಿ ಸಮರ್ಥಿಸಿಕೊಂಡಿದ್ದಾಳೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version