Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ರವೀನಾ ಟಂಡನ್ ಪುತ್ರಿಯಿಂದ: ಸಾವಿರ ಕಂಬದ ಬಸದಿಗೆ ಯಾಂತ್ರೀಕೃತ ಆನೆ ಕೊಡುಗೆ

ರವೀನಾ ಟಂಡನ್ ಪುತ್ರಿಯಿಂದ: ಸಾವಿರ ಕಂಬದ ಬಸದಿಗೆ ಯಾಂತ್ರೀಕೃತ ಆನೆ ಕೊಡುಗೆ

0

ಮಂಗಳೂರು: ಬಾಲಿವುಡ್ ನಟಿ ರವೀನಾ ಟಂಡನ್ ಮತ್ತು ಆಕೆಯ ಪುತ್ರಿ ರಾಶಾ ತಾದಾನಿ ಕೊಡುಗೆಯಾಗಿ ಮೂಡುಬಿದಿರೆಯ ಐತಿಹಾಸಿಕ ಸಾವಿರ ಕಂಬದ ಬಸದಿಗೆ ಯಾಂತ್ರೀಕೃತ ಆನೆಯನ್ನು ಕೊಡುಗೆಯಾಗಿ ನೀಡಿದ್ದಾರೆ.

ಪಳಗಿಸಿದ ಆನೆಗಳನ್ನು ಬಳಸುವುದರಿಂದ ಕಾಡಿನ ಸಹಜ ಬದುಕನ್ನು ಕಸಿದುಕೊಂಡು ಹಿಂಸೆ ನೀಡಿದಂತಾಗುತ್ತದೆ ಎಂದು ಅದರ ವಿರುದ್ಧ ನೈಜ ಆನೆಗಳನ್ನೇ ಹೋಲುವ ಮೆಕ್ಯಾನಿಕಲ್ ಆನೆಗಳನ್ನು ಪ್ರೋತ್ಸಾಹಿಸಿ ಎನ್ನುತ್ತಿರುವ ಪೇಟಾ ಇಂಡಿಯಾದ ಮುಂಬೈ ಮೂಲದ ಪ್ರೇರಣೆಯಿಂದ ಬಾಲಿವುಡ್ ತಾರಾ ಕುಟುಂಬದ ಕೊಡುಗೆಯಾಗಿ ಈ ಆನೆ ಒದಗಿ ಬಂದಿದೆ.

ಜೈನಕಾಶಿಯಲ್ಲಿ ಚಾತುರ್ಮಾಸನಿರತ 108 ಗುಲಾಬ್ ಭೂಷಣ ಮುನಿ ಮಹಾರಾಜರು ಹಾಗೂ ಭಟ್ಟಾರಕ ಶ್ರೀಗಳು ನೂತನ ಐರಾವತವನ್ನು ಅನಾವರಣಗೊಳಿಸಿದರು. ಪೇಟಾ ಸಂಸ್ಥೆಯ ಅಧಿಕಾರಿ ಅರುಣ್ ಕುಮಾರ್, ಸುಪ್ರಿಯಾ ಸಹಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಮೆಕ್ಯಾನಿಕಲ್ ಆನೆ ದೇಶದಲ್ಲೇ ಮೊದಲ ಬಾರಿಗೆ ಜೈನ ಬಸದಿಗೆ ಬಂದಿದೆ. 3 ಮೀ. ಎತ್ತರ, 800 ಕೆ.ಜಿ. ಭಾರವಾಗಿದ್ದು ರಬ್ಬರ್, ಫೈಬರ್, ಮೆಟಲ್, ಮೆಶ್, ಫೋಮ್, ಕಬ್ಬಿಣ ಹಾಗೂ ಐದು ಮೋಟಾರುಗಳ ನೆರವಿನಿಂದ ನಿರ್ಮಿಸಲಾಗಿದೆ. ವಿದ್ಯುತ್ ಸಂಪರ್ಕ ನೀಡಿ ಅದನ್ನು ನೈಜ ಆನೆಯಂತೆ ಬಳಸಿಕೊಳ್ಳಲು ಸಾಧ್ಯವಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version