Home ನಮ್ಮ ಜಿಲ್ಲೆ ಬೆಂಗಳೂರು ತರಕಾರಿ ಬೆಲೆ ಗಗನಮುಖಿ

ತರಕಾರಿ ಬೆಲೆ ಗಗನಮುಖಿ

0

ರಾಜ್ಯದ ಮೇಲೂ ಮೊಂಥಾ ಚಂಡಮಾರುತ ಬೀರಿದ ಪರಿಣಾಮದಿಂದಾಗಿ ಹಲವು ಜಿಲ್ಲೆಗಳಲ್ಲಿ ಮಳೆ ಸುರಿದು ತರಕಾರಿ ಬೆಳೆ ನಾಶವಾದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ತರಕಾರಿ ಬಾರದ ಕಾರಣ ಕೆಲವು ತರಕಾರಿಗಳ ಬೆಲೆ ಗಗನಮುಖಿಯಾಗಿದೆ.ಇದರಿಂದ ಮಾರುಕಟ್ಟೆಯಲ್ಲಿ ಯಾವ ತರಕಾರಿ ದರ ಕೇಳಿದರೂ ಜನರು ಖರೀದಿಸಲು ಹಿಂದುಮುಂದು ನೋಡುವಂತಾಗಿದೆ.

ಬೀನ್ಸ್ ಶತಕದತ್ತ ಮುಖಮಾಡಿದ್ದರೆ ಇತ್ತ ಹೀರೇಕಾಯಿ ಅರ್ಧ ಶತಕದತ್ತ ಮುನ್ನುಗ್ಗುತ್ತಿದೆ. ಇದೇ ಸಾಲಿಗೆ ಬಟಾಣಿ, ಕ್ಯಾರೆಟ್, ತೊಗರಿಕಾಯಿ, ಆಲೂಗಡ್ಡೆ ದರವು ಹೆಚ್ಚಾಗಿದೆ. ಇದರಿಂದ ಬಹುತೇಕ ಮಧ್ಯಮ ಕುಟುಂಬಗಳಲ್ಲಿ ಗೃಹಿಣಿಯರು ಕಾಯಿಪಲ್ಯ ಮಾಡುವುದು ಬಿಟ್ಟು, ತಿಳಿ ಸಾರು ಮಾಡಲು ಮುಂದಾಗಿದ್ದಾರೆ.ಯಾವ ತರಕಾರಿ ಬೆಲೆ ಕೇಳಿ ಗ್ರಾಹಕರು ಕಂಗಾಲಾಗುತ್ತಿದ್ದಾರೆ.

ಇದರಿಂದ ಯಾರು ತರಕಾರಿ ಕೊಳ್ಳಲು ಬರುತ್ತಿಲ್ಲ, ವ್ಯಾಪಾರ ಸರಿಯಾಗಿ ನಡೆಯದೇ ಇದ್ದರೆ ಜೀವನ ಸಾಗಿಸುವುದು ಕಷ್ಟ ಎಂದು ತರಕಾರಿ ವ್ಯಾಪಾರಿಗಳು ತನ್ನ ನೋವು ತೋಡಿಕೊಂಡಿದ್ದಾರೆ. ತರಕಾರಿ ಬೆಲೆ ಕೇಳಿ ಗೃಹಿಣಿಯರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಒಂದು ಕೆಜಿ ತರಕಾರಿ ಕೊಂಡುಕೊಳ್ಳುವ ಮಹಿಳೆಯರು ಅರ್ಧ, ಕಾಲು ಕೆಜಿ ಕೊಳ್ಳಲು ಮುಂದಾಗುತ್ತಿದ್ದಾರೆ.

ತರಕಾರಿ ದರ (ಕೆ.ಜಿ ರೂಗೆ)

  • ಕ್ಯಾರೆಟ್- 40 ರಿಂದ 90
  • ನುಗ್ಗೆಕಾಯಿ-14 ರಿಂದ 150
  • ಬಟಾಣಿ ಫಾರಂ-260 ರಿಂದ 270
  • ಬೀನ್ಸ್- 80 ರಿಂದ 100
  • ಈರುಳ್ಳಿ- 40 ರಿಂದ 50
  • ಹೀರೇಕಾಯಿ- 50 ರಿಂದ 60
  • ಶುಂಠಿ-100 ರಿಂದ 110
  • ತೊಗರಿಕಾಯಿ-60 ರಿಂದ 80
  • ಟೊಮೇಟೊ- 30 ರಿಂದ 40
  • ಆಲೂಗಡ್ಡೆ- 50 ರಿಂದ 60
  • ಬಿಟ್ಯೂಟ್ – 70 ರಿಂದ 80
  • ಬದನೆಕಾಯಿ- 60 ರಿಂದ 70
  • ಬೆಂಡೆಕಾಯಿ- 70 ರಿಂದ 80

NO COMMENTS

LEAVE A REPLY

Please enter your comment!
Please enter your name here

Exit mobile version