Home ನಮ್ಮ ಜಿಲ್ಲೆ ಬೆಂಗಳೂರು ಗ್ರಾಮಾಂತರ ರಾಜ್ಯದಲ್ಲೇ ಮೊದಲು: ಗ್ರಾಮ ಪಂಚಾಯಿತಿಗೊಂದು ಮಾದರಿ ಅಂಗನವಾಡಿ

ರಾಜ್ಯದಲ್ಲೇ ಮೊದಲು: ಗ್ರಾಮ ಪಂಚಾಯಿತಿಗೊಂದು ಮಾದರಿ ಅಂಗನವಾಡಿ

0

ಹರ್ಷ.ಪಿ.,ದೇವನಹಳ್ಳಿ

ರಾಜ್ಯದಲ್ಲಿಯೇ ವಿಶೇಷವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗೊಂದು ಮಾದರಿ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 101 ಗ್ರಾಮ ಪಂಚಾಯತಿಗಳಲ್ಲಿಗಳಲ್ಲಿ ತಲಾ ಒಂದೊಂದು ಅಂಗನವಾಡಿಗಳನ್ನು ಮಾದರಿ ಅಂಗನವಾಡಿಗಳಾಗಿ ಉನ್ನತೀಕರಿಸಲು ಕ್ರಮವಹಿಸಲಾಗಿದೆ.

ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗೊಂದು ಮಾದರಿ ಶಾಲೆ ನಿರ್ಮಾಣ ಮಾಡಲು ಸರಕಾರ ಈಗಾಗಲೇ ಮುಂದಾಗಿದೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಾಲಾ ಪೂರ್ವ ಶಿಕ್ಷಣಕ್ಕೆ ಜಿಲ್ಲಾ ಪಂಚಾಯಿತಿ ಒತ್ತು ಕೊಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಈಗಾಗಲೇ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದೊಂದು ಅಂಗನವಾಡಿಗಳನ್ನು ಆಯ್ಕೆ ಮಾಡಿಕೊಳ್ಳ ಲಾಗಿದೆ.

ಈ ಅಂಗನವಾಡಿಗಳಿಗೆ ಗ್ರಾಮ ಪಂಚಾಯಿತಿ ಅನುದಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಸಿಎಸ್‌ಆರ್ ಅನುದಾನ ಹಾಗೂ ದಾನಿಗಳ ಮೂಲಕ ಮಕ್ಕಳಿಗೆ ಸಮವಸ್ತ್ರ ಮಳೆ ಕೊಯ್ದು ಅಳವಡಿಕೆ, ಆಟಿಕೆ, ಕೌಶಲ್ಯಗಳ ಕಲಿಕೆಗೆ ಟಿಪಿ ವ್ಯವಸ್ಥೆ ಸೇರಿದಂತೆ ವಿವಿಧ ರೀತಿಯ ಸೌಲಭ್ಯ ನೀಡುವ ಮೂಲಕ ಶಾಲಾ ಪೂರ್ವ ಶಿಕ್ಷಣ ಉತ್ತಮಪಡಿಸಲು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

ಏನೇನು ಸೌಲಭ್ಯ ?: ಈ ಮಾದರಿ ಅಂಗನವಾಡಿಗಳಲ್ಲಿ ಗುಣಮಟ್ಟದ ಶಿಕ್ಷಣ, ಶೌಚಾಲಯ, ನೀರಿನ ಸೋಂಪು ಸೇರಿದಂತೆ ಆಯಾ ಅಂಗನವಾಡಿಗಳ ಅಗತ್ಯತೆಯ ಅನುಸಾರ ವಿವಿಧ ರೀತಿಯ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಲಾಗಿದೆ. ವ್ಯವಸ್ಥೆ ಬೋಧನಾ ಹಾಗೂ ಆಟಿಕೆ ಸಾಮಾಗ್ರಿ, ಮಕ್ಕಳ ಸ್ನೇಹಿ ಚೇರ್, ರೌಂಡ್ ಚೀರ್ಸ್, ಭಿತ್ತಿ ಚಿತ್ರಗಳು, ಮಕ್ಕಳಿಗೆ ಸಮವಸ್ತ್ರ ಅಡುಗೆ ಕೋಣೆ, ಮಳೆನೀರು ಕೊಯ್ದು ಪದ್ಧತಿ ಅಳವಡಿಕೆ, ಹೊರಾಂಗಣ ಆಟದ ಸಾಮಾಗ್ರಿ, ಟಿವಿ ಸ್ಟ್ರೀನ್‌ಗಳು, ಕೈತೋಟ, ಮಕ್ಕಳ ಸ್ನೇಹಿ ಹ್ಯಾಂಡ್ ವಾನ್, ಜಮಕಾನ, ಮಕ್ಕಳ ಜಾರುಬಂಡಿ, ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಈ ಕುರಿತು ಡಾ.ಕೆ.ಎನ್ ಅನುರಾಧ ಸಿಇಒ, ಜಿನು, ಬೆಂಗಳೂರು ಗ್ರಾಮಾಂತರ ಮಾತನಾಡಿ, “ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದು ಅಂಗನವಾಡಿಯನ್ನು ಮಾದರಿ ಅಂಗನವಾಡಿಯಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಗುರುತಿಸಲಾದ ಅಂಗನವಾಡಿಗಳಲ್ಲಿ ಕಟ್ಟಡದ ದುರಸ್ತಿ, ಉನ್ನತೀಕರಣ ಸಂಬಂಧ ಕಾಮಗಾರಿ ಕೈಗೊಳ್ಳಲು ನಿಯಮಾನುಸಾರ ಕ್ರಮವಹಿಸಲು ಸೂಚಿಸಲಾಗಿದೆ” ಎಂದು ಹೇಳಿದ್ದಾರೆ.

ಮುದ್ದಣ್ಣ ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾತನಾಡಿ, “ಜಿಲ್ಲೆಯಲ್ಲಿ ಆಯ್ಕೆ ಮಾಡಲಾದ ಅಂಗನವಾಡಿಗಳನ್ನು ಮಾದರಿ ಅಂಗನವಾಡಿಗಳಾಗಿ ಉನ್ನತೀಕರಿಸಲು ಕ್ರಮವಹಿಸಲಾಗಿದೆ. ಈಗಾಗಲೇ ವಿವಿಧ ಅನುದಾನಗಳ ಮೂಲಕ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈ ಬಗ್ಗೆ ಸಭೆಗಳನ್ನು ನಡೆಸಲಾಗಿದೆ” ಎಂದು ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version