Home ನಮ್ಮ ಜಿಲ್ಲೆ ಧಾರವಾಡ ಸ್ವರ್ಣ ಸಂಭ್ರಮ: ಲಕ್ಕಿ ಡ್ರಾ 9ರಂದು

ಸ್ವರ್ಣ ಸಂಭ್ರಮ: ಲಕ್ಕಿ ಡ್ರಾ 9ರಂದು

0

ಹುಬ್ಬಳ್ಳಿ: ಪ್ರತಿಷ್ಠಿತ ಸಂಯುಕ್ತ ಕರ್ನಾಟಕ' ದಿನ ಪತ್ರಿಕೆ ತನ್ನ ಓದುಗರಿಗಾಗಿ ಆಯೋಜಿಸಿದ್ದಸ್ವರ್ಣ ಸಂಭ್ರಮ’ ಲಕ್ಕಿ ಡ್ರಾ ಹಾಗೂ ಗಣೇಶೋತ್ಸವ ಪ್ರಯುಕ್ತ ಸಂಯುಕ್ತ ಕರ್ನಾಟಕ' ಪತ್ರಿಕೆಯು ಮಕ್ಕಳಿಗಾಗಿ ಏರ್ಪಡಿಸಿದ್ದಗಣಪನಿಗೆ ಬಣ್ಣ ಹಚ್ಚಿ ಬಹುಮಾನ ಗೆಲ್ಲಿ’ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಅಕ್ಟೋಬರ್ 9ರಂದು ಸೋಮವಾರ ಸಂಜೆ ೪.೩೦ಕ್ಕೆ ಕೊಪ್ಪೀಕರ ರಸ್ತೆಯ ಸಂಯುಕ್ತ ಕರ್ನಾಟಕ' ಕಚೇರಿ ಆವರಣದ ಕಬ್ಬೂರ ಸಭಾಗೃಹದಲ್ಲಿ ನಡೆಯಲಿದೆ. ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಆಗಸ್ಟ್ ೨೪ರಿಂದ ಸೆಪ್ಟೆಂಬರ್ ೨೩ರ ವರೆಗೆಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟಗೊಂಡ ಕೂಪನ್‌ಗಳಲ್ಲಿ ಮಾಹಿತಿ ತುಂಬಿ ಸಲ್ಲಿಸಿದವರ ಪೈಕಿ ೨೫ ಅದೃಷ್ಟಶಾಲಿಗಳಿಗೆ ಅಂದೇ ಸ್ವರ್ಣ ಜ್ಯುವೆಲರ‍್ಸ್ ವತಿಯಿಂದ 2000 ರೂ. ಮೌಲ್ಯದ (ಬೆಳ್ಳಿ ಹಾಗೂ ಜೆಮ್ಸ್ ಜ್ಯುವೆಲರಿ) ಗಿಫ್ಟ್ ವೋಚರ್ ನೀಡಲಾಗುವುದು.
ಈ ಕಾರ್ಯಕ್ರಮದಲ್ಲಿ ದತ್ತಾ ಇನ್ಫ್ರಾಸ್ಟ್ರಕ್ಚರ್ ಮಾಲೀಕರಾದ ಪ್ರಕಾಶ ಜೋಶಿ ಹಾಗೂ ಹುಬ್ಬಳ್ಳಿ-ಧಾರವಾಡ ಬಂಟರ್ ಸಂಘದ ಅಧ್ಯಕ್ಷರಾದ ಸುಗ್ಗಿ ಸುಧಾಕರ್ ಶೆಟ್ಟಿ, ಸ್ವರ್ಣ ಸಮೂಹ ಸಂಸ್ಥೆಗಳ ಪಾಲುದಾರರಾದ ಗುಜ್ಜಾಡಿ ಗೋಪಾಲ ನಾಯಕ ಅವರು ಆಗಮಿಸುವರು.

ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಗಿಫ್ಟ್ ವೋಚರ್
ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಲ್ಲಿ 10 ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿ, ಅವರಿಗೂ ಸಹ ಸ್ವರ್ಣ ಜ್ಯುವೆಲರ‍್ಸ್ ವತಿಯಿಂದ 2000 ರೂ. ಮೌಲ್ಯದ ಗಿಫ್ಟ್ ವೋಚರ್ ನೀಡಲಾಗುವುದು.

Exit mobile version