Home ತಾಜಾ ಸುದ್ದಿ ಸ್ಪೀಕರ್ ಸ್ಥಾನಕ್ಕಿಂದು ಖಾದರ ನಾಮಪತ್ರ ಸಲ್ಲಿಕೆ

ಸ್ಪೀಕರ್ ಸ್ಥಾನಕ್ಕಿಂದು ಖಾದರ ನಾಮಪತ್ರ ಸಲ್ಲಿಕೆ

0

ಬೆಂಗಳೂರು: ಮೇ 24 ರಂದು ವಿಧಾನಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಇಂದು (ಮಂಗಳವಾರ) ಮಧ್ಯಾಹ್ನ 12ರ ಒಳಗೆ ಸ್ಪೀಕರ್ ಚುನಾವಣೆಗೆ ಸ್ಪರ್ಧಿಸುವವರು ನಾಮಪತ್ರ ಸಲ್ಲಿಸಬೇಕಾಗುತ್ತದೆ ಎಂದು ವಿಧಾನಸಭೆ ಬುಲೆಟಿನ್  ಹೊರಡಿಸಿತ್ತು. ನಿನ್ನೆ ಕಾಂಗ್ರೆಸ್ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದ್ರೆ ಸ್ಪೀಕರ್ ಆಗಿ ಮುಂದುವರಿಯಲು ಆರ್ ವಿ ದೇಶಪಾಂಡೆ ಹಿಂದೇಟು ಹಾಕಿದ್ದರು.
ಅದರಿಂದ ಕಾಂಗ್ರೆಸ್ ಸೋಮವಾರ ತಡರಾತ್ರಿ ಮಾಜಿ ಸಚಿವ ಯು.ಟಿ. ಖಾದರ್ ಅವರನ್ನು ಮಾಡಲು ನಿರ್ಧರಿಸಿದೆ. ಅದರಂತೆ ಇಂದು ಬೆಳಿಗ್ಗೆ 11 ಗಂಟೆಗೆ ಸಭಾಧ್ಯಕ್ಷ ಸ್ಥಾನಕ್ಕೆ ಯುಟಿ ಖಾದರ್ ನಾಮಪತ್ರ ಸಲ್ಲಿಸಲಿದ್ದು, ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

Exit mobile version