Home ನಮ್ಮ ಜಿಲ್ಲೆ ಸೇನಾ ಭರ್ತಿಗೆ ಹೋಗಿದ್ದ ಕರಜಗಾ ಯುವಕ ಅಪಘಾತದಲ್ಲಿ ಸಾವು

ಸೇನಾ ಭರ್ತಿಗೆ ಹೋಗಿದ್ದ ಕರಜಗಾ ಯುವಕ ಅಪಘಾತದಲ್ಲಿ ಸಾವು

0


ಹುಕ್ಕೇರಿ : ತಮಿಳುನಾಡಿನಲ್ಲಿ ನಡೆಯುತ್ತಿದ್ದ ಭಾರತೀಯ ಸೇನಾ ನೇಮಕಾತಿ ಪರೀಕ್ಷೆಗೆ ತೆರಳಿದ ಸಮಯದಲ್ಲಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ತಾಲೂಕಿನ ಕರಜಗಾ ಗ್ರಾಮದ ಯುವಕ ಮೃತಪಟ್ಟಿದ್ದಾನೆ.
ಪ್ರಮೋದ ನಾಂಗರೆ (೨೪) ಮೃತ ಯುವಕ. ಸೇನೆ ಭರ್ತಿಗೆಂದು ತಮಿಳುನಾಡಿಗೆ ಹೋಗಿದ್ದ ಈ ವೇಳೆ ಊಟಕ್ಕೆ ತೆರಳುತ್ತಿರುವಾಗ ದ್ವೀಚಕ್ರವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ. ಕೂಡಲೇ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.
ಸೇನೆಗೆ ಸೇರಿ ಕುಟುಂಬವನ್ನು ಆರ್ಥಿಕ ದುಃಸ್ಥಿತಿಯಿಂದ ಕಾಪಾಡಬೇಕೆಂದು ಕನಸು ಹೊತ್ತು ಹೋಗಿದ್ದ ಯುವಕ ಹೆಣವಾಗಿ ಮನೆಗೆ ಮರಳಿದ್ದನ್ನು ಕಂಡು ಮನೆಯವರು, ಸಂಬAಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು.

ಮೃತನಿಗೆ ತಂದೆ, ತಾಯಿ, ಇಬ್ಬರು ಸಹೋದರಿಯರನ್ನು ಅಗಲಿಲಿದ್ದಾರೆ. ಪ್ರಮೋದ ಗುರುವಾರ ಸಂಜೆ ಸ್ವಗ್ರಾಮದಲ್ಲಿ ಅಂತ್ಯಸAಸ್ಕಾರ ನೆರವೇರಿತು.

Exit mobile version