Home ಅಪರಾಧ ಸುಪಾರಿ ಕೊಲೆ ಪ್ರಕರಣ: ಮೂರು ಅಡಿ ಆಳದಲ್ಲಿ ಹೂತ ಶವ ಹೊರಕ್ಕೆ

ಸುಪಾರಿ ಕೊಲೆ ಪ್ರಕರಣ: ಮೂರು ಅಡಿ ಆಳದಲ್ಲಿ ಹೂತ ಶವ ಹೊರಕ್ಕೆ

0

ಹುಬ್ಬಳ್ಳಿ : ನಗರದ ಉದ್ಯಮಿ ಭರತ್ ಜೈನ್ ( ಮಹಾಜನಶೇಟ್) ಮಗ ಅಖಿಲ್ ಜೈನ್ ನ್ನು ಹತ್ಯೆ ಮಾಡಿದ ಸುಪಾರಿ ಹಂತಕರು ಹೂತಿದ್ದ ಸ್ಥಳದಲ್ಲಿ ಶವ ಹೊರ ತೆಗೆಯುವ ಕಾರ್ಯ ಪೂರ್ಣಗೊಂಡಿದೆ.
ಮೂರು ಅಡಿ ಆಳದಲ್ಲಿ ಶವ ಪತ್ತೆಯಾಗಿದೆ. ಬಾಯಿಗೆ ಬಟ್ಟೆ ತುರುಕಿ, ಕೈಗಳನ್ನು ಹಿಂಬದಿಗೆ ಕಟ್ಟಿ, ಕಾಲುಗಳನ್ನು ಕಟ್ಟಿ ಹತ್ಯೆ ಮಾಡಿದ ಸ್ಥಿತಿಯಲ್ಲಿ ಅಖಿಲ್ ಶವ ಪತ್ತೆಯಾಗಿದೆ ಎನ್ನಲಾಗಿದೆ. ಪ್ರಕರಣದ ನಾಲ್ಕನೇ ಆರೋಪಿ ರೆಹಮಾನ್‌ನ್ನು ಸ್ಥಳಕ್ಕೆ ಕರೆತಂದ ಪೊಲೀಸರು ಹತ್ಯೆ ಕೃತ್ಯ ಹೇಗೆ ನಡೆಸಲಾಯಿತು, ಹೇಗೆ ಹೂಳಲಾಯಿತು ಎಂಬ ವಿವರವನ್ನು ಆರೋಪಿಯಿಂದ ಪಡೆದರು. ಆರೋಪಿ ಸಮ್ಮುಖದಲ್ಲೇ ಶವ ಹೊರ ತೆಗೆಯಲಾಗಿದೆ.

Exit mobile version