ಹುಬ್ಬಳ್ಳಿ: ಇಲ್ಲಿನ ಹಳೇ ಕೋರ್ಟ್ ವೃತ್ತದ ಬಳಿ ಇರುವ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ೧೦೫ನೇ ಶ್ರೀ ಸಾಯಿ ಬಾಬಾರ ಸಮಾಧಿ ಉತ್ಸವ ಉದ್ಘಾಟನೆ ಕಾರ್ಯಕ್ರಮ ಮಂಗಳವಾರ ಸಂಜೆ ನಡೆಯಿತು.
ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿದ ಉದ್ಯಮಿ ಸೋಮಶೇಖರ ವಿ. ಹತ್ತಿ ಮಾತನಾಡಿ, ಸಾಯಿಬಾಬಾರ ಕೃಪೆಯಿಂದ ಅಪಾರ ಭಕ್ತ ಸಮೂಹಕ್ಕೆ ಒಳಿತಾಗಿದೆ. ಅಸಂಖ್ಯಾತ ಭಕ್ತರು ಮಂದಿರದ ಜೀರ್ಣೋದ್ಧಾರ. ಧಾರ್ಮಿಕ ಕಾರ್ಯಗಳಿಗೆ ಕೈ ಜೋಡಿಸಿದ್ದಾರೆ. ಸದ್ಭಕ್ತ ಮಂಡಳಿಯು ಇದೇ ರೀತಿಯ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.
ಶ್ರೀ ಸಾಯಿಬಾಬಾಮೂರ್ತಿ ಪುನಃ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮಗಳು ಸೇರಿದಂತೆ ಹೋಮ, ಪೂಜೆ, ರಥೋತ್ಸವ ಸೇರಿದಂತೆ ಹಲವು ಕಾರ್ಯಕ್ರಮ ಒಂದು ವಾರಗಳ ಕಾಲ ನಡೆಯಲಿದ್ದು, ಭಕ್ತರು ಪಾಲ್ಗೊಂಡು ಸಾಯಿಬಾಬಾ ಕೃಪೆಗೆ ಪಾತ್ರರಾಗಬೇಕು ಎಂದರು.
ಶಿರಡಿ ಸಾಯಿ ಸದ್ಭಕ್ತ ಮಂಡಳಿ ಅಧ್ಯಕ್ಷ ಮಹದೇವ ಎಚ್. ಮಾಶ್ಯಾಳ, ಶ್ರೀ ಸಾಯಿ ಸಮಾಧಿ ಉತ್ಸವ ಸಮಿತಿ ಹಾಗೂ ಶಿರಡಿ ಸಾಯಿ ಸದ್ಭಕ್ತ ಮಂಡಳಿ ನಿರ್ದೇಶಕರಾದ ಬ್ರಿಜ ಮೋಹನ ಭುತಡಾ, ಶಂಕರಪ್ಪ ಎನ್. ಯಲಿಗಾರ, ಪ್ರಿಯಾಂಕ ವಿ. ಕಠಾರೆ, ಪವಿತ್ರಾ ಪಿ. ಕಡಪಟ್ಟಿ, ಸಹ ಉಸ್ತುವಾರಿಗಳಾದ ನಾರಾಯಣ ಪಿ. ಜಾಧವ, ಪರಶುರಾಮ ಪಿ. ಚುಟಕೆ, ನಾರಾಯಣ ಎ. ಅಥಣಿ, ಲಕ್ಷ್ಮೀ ನಾಯ್ಕ ದೀಪಾ ಶೇಟ್, ಶಿರಡಿ ಸಾಯಿ ಸದ್ಭಕ್ತ ಮಂಡಳಿಯ ಉಪಾಧ್ಯಕ್ಷ ಶರಣಪ್ಪ ಎಂ. ದೇವನೂರ, ನರಸಿಂಗಸಾ ಆರ್. ರತನ್, ಕಾರ್ಯದರ್ಶಿ ಪಾಂಡುರಂಗ ಎನ್. ಧೋಂಗಡಿ, ಸಹ ಕಾರ್ಯದರ್ಶಿ ಪ್ರಕಾಶ ಚಳಗೇರಿ, ಕೋಶಾಧ್ಯಕ್ಷ ಗೋವಿಂದ ಕೆ. ಕೋಟಕರ ಸೇರಿದಂತೆ ಹಲವು ಪ್ರಮುಖರಿದ್ದರು.
