Home ನಮ್ಮ ಜಿಲ್ಲೆ ಕೋಲಾರ ಶಿವಮೊಗ್ಗ ಗಲಭೆ ಪೂರ್ವ ನಿಯೋಜಿತ ಕೃತ್ಯ

ಶಿವಮೊಗ್ಗ ಗಲಭೆ ಪೂರ್ವ ನಿಯೋಜಿತ ಕೃತ್ಯ

0

ಕೋಲಾರ: ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆ ಪೂರ್ವ ನಿಯೋಜಿತ ಕೃತ್ಯ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದ್ದಾರೆ.
ಕೋಲಾರದಲ್ಲಿ ಶಿವಮೊಗ್ಗ ಗಲಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಎಲ್ಲಾ ರೀತಿಯ ಅನುಮಾನಗಳನ್ನ ಹುಟ್ಟುಹಾಕಿವೆ ಎಂದ ಅವರು ನಂಬಿಕೆ ದ್ರೋಹಿಗಳ ಋಣ ತೀರಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜರ ಅರಮನೆ ಹಾಳು ಮಾಡಿದವರ ಋಣ ತೀರಿಸಬೇಕು ಅಂತೀರಲ್ಲಾ? ಸಿಎಂ ಸಿದ್ದರಾಮಯ್ಯನವರೇ ನಿಮಗೆ ಮಾನ, ಮರ್ಯಾದೆ ಇದೆಯಾ? ಯಾವತ್ತೋ ಎಗರಿಹೋದ ಟಿಪ್ಪುವಿನ ಖಡ್ಗ ಇಟ್ಟುಕೊಂಡು ಓಡಾಡುವ ನಿಮಗೆ ಇಷ್ಟು ಇರಬೇಕಾದ್ರೆ? ನಮಗೆ ಇನ್ನೆಷ್ಟು ಇರಬೇಡಾ? ಟಿಪ್ಪು ಹತ್ಯೆ ಮಾಡಿದ ಉರಿಗೌಡ, ನಂಜೇಗೌಡನ ವಂಶಸ್ಥರು ನಾವು. ನಮಗೆ ಇನ್ನೆಷ್ಟು ಇರಬೇಡಾ? ಎಂದ ಮಾಜಿ ಶಾಸಕ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.

Exit mobile version