Home ನಮ್ಮ ಜಿಲ್ಲೆ ವಿ. ಸೋಮಣ್ಣ ಪಕ್ಷ ಬಿಡಲ್ಲ

ವಿ. ಸೋಮಣ್ಣ ಪಕ್ಷ ಬಿಡಲ್ಲ

0
BSY

ಬಾಗಲಕೋಟ: ವಿ. ಸೋಮಣ್ಣ ಸೇರಿದಂತೆ ಯಾವದೇ ಮುಖಂಡರು ಬಿಜೆಪಿ ಬಿಟ್ಟು ಹೋಗುವದಿಲ್ಲವೆಂಬ ವಿಶ್ವಾಸವಿದೆ. ಇಂತಹ ಯಾವದೇ ತರಹ ಸುದ್ದಿಗೆ ಮಹತ್ವವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹೇಳಿದರು, ಎಲ್ಲರೂ ಪಕ್ಷ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ನಮ್ಮ ಆತ್ಮೀಯ ಸ್ನೇಹಿತರು. ಯಾವದೋ ಒಂದೆರಡು ಸಂರ್ಭಗಳಲ್ಲಿ ಅವರು ಹೇಳಿಕೆ ಕೊಟ್ಟಿದ್ದು ಅಪರಾಧವೆಂದು ನಾನು ಪರಿಗಣಿಸಲ್ಲ. ನಮ್ಮಲ್ಲಿ ಎಲ್ಲವೂ ಸರಿಯಿದೆ. ಯಾವದೇ ಗೊಂದಲವಿಲ್ಲ. ಯತ್ನಾಳ ಅವರೂ ಕೂಡ ಸುಧಾರಿಸಿಕೊಂಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಯತ್ನಾಳ ಪರ ಸಾಫ್ಟ್ ಆದ ಪ್ರಸಂಗ ನಡೆಯಿತು. ಮಾಜಿ ಸಿಎಂ ಸಿದ್ರಾಮಯ್ಯನವರ ಹೇಳಿಕೆ ವಿಚಾರವಾಗಿ ಕಾಮಗಾರಿ ಪೂರ್ಣವಾಗದೇ ರಾಜ್ಯಕ್ಕೆ ನರೇಂದ್ರ ಮೋದಿಯವರು ಉದ್ಘಾಟನೆ ಕರೆ ತರುತ್ತಾರೆಂಬ ವಿಚಾರ ಶುದ್ಧ ಸುಳ್ಳು. ಎರಡು ಸೇತುವೆಗಳು ಸೇರಿ ಸಣ್ಣ ಪುಟ್ಟ ಕೆಲಸ ನಡೀತಾಯಿದೆ. ಅದನ್ನು ಬಿಟ್ಟರೆ ಯಾವದೇ ಸಮಸ್ಯೆಯಿಲ್ಲ. ಈಗಾಗಲೇ ವಾಹನಗಳ ಓಡಾಟ ಶುರುವಾಗಿದ್ದು ಸಿದ್ರಾಮಯ್ಯನವರ ಹೇಳಿಕೆಯಲ್ಲಿ ಅರ್ಥವಿಲ್ಲ ಎಂದರು.

Exit mobile version