Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ರಾಹುಲ್‌ಗೆ ಕಂಡದ್ದು ರಾಜಕೀಯ ನಿರುದ್ಯೋಗ!

ರಾಹುಲ್‌ಗೆ ಕಂಡದ್ದು ರಾಜಕೀಯ ನಿರುದ್ಯೋಗ!

0

ಮಂಗಳೂರು: ಕಳೆದ ಎಂಟು ವರ್ಷಗಳಿಂದ ದೇಶದಲ್ಲಿ ಅಭಿವೃದ್ಧಿಯ ಶಕೆಯನ್ನೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೂ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಅವರು ದೇಶದಲ್ಲಿ ನಿರುದ್ಯೋಗದ ಬಗ್ಗೆ ಆರೋಪಿಸುತ್ತಿದ್ದಾರೆ. ವಾಸ್ತವದಲ್ಲಿ ರಾಹುಲ್ ಹಾಗೂ ಕಾಂಗ್ರೆಸಿಗರು ತಮ್ಮ ರಾಜಕೀಯ ನಿರುದ್ಯೋಗವನ್ನೇ ದೇಶದ ನಿರುದ್ಯೋಗ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಬೆಂಗಳೂರು ದಕ್ಷಿಣ ಸಂಸದ, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.
ದ.ಕ. ಬಿಜೆಪಿಯ ಆರ್ಥಿಕ ಪ್ರಕೋಷ್ಠದಿಂದ ಭಾನುವಾರ ಇಲ್ಲಿನ ಕೆನರಾ ಶಿಕ್ಷಣ ಸಂಸ್ಥೆಗಳ ಸುಧೀಂದ್ರ ಸಭಾಂಗಣದಲ್ಲಿ ‘ಕೇಂದ್ರ ಬಜೆಟ್ ಕುರಿತ ವಿಶ್ಲೇಷಣೆ ಹಾಗೂ ಸಂವಾದ’ದಲ್ಲಿ ಅವರು ಮಾತನಾಡಿದರು.
ಕಳೆದ ಎಂಟು ವರ್ಷದಲ್ಲಿ ಉದ್ಯೋಗ ನೋಂದಣಿ ಸಂಖ್ಯೆ ೯.೫ ಕೋಟಿನಿಂದ ೨೭ ಕೋಟಿಗೆ ಏರಿಕೆಯಾಗಿದೆ. ನಿರುದ್ಯೋಗವಾದರೆ ಇಷ್ಟೊಂದು ಸಂಖ್ಯೆಯಲ್ಲಿ ಉದ್ಯೋಗ ನೋಂದಣಿ ಹೇಗೆ ಸಾಧ್ಯವಾಯಿತು. ಇದರ ಬಗ್ಗೆ ತಿಳಿದುಕೊಳ್ಳದೆ ಅಥವಾ ಉzಶಪೂರ್ವಕವಾಗಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸಿಗರು ದೇಶದ ಜನತೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದರು.
ಮುಂದಿನ ೨೫ ವರ್ಷಗಳ ಭಾರತ ಅಭಿವೃದ್ಧಿಯ ದೂರದೃಷ್ಟಿಯನ್ನು ಇರಿಸಿಕೊಂಡು ೨೦೨೩ನೇ ಸಾಲಿನ ಬಜೆಟ್‌ನ್ನು ಕೇಂದ್ರ ಸರ್ಕಾರ ರೂಪಿಸಿದೆ. ಕಳೆದ ಎಂಟು ವರ್ಷಗಳಲ್ಲಿ ಈ ದಿಕ್ಕಿನಲ್ಲಿ ಸಾಗಲು ಸೂಕ್ತ ರನ್‌ವೇಯನ್ನು ಪ್ರಧಾನಿ ನರೇಂದ್ರ ಮೋದಿ ಕಲ್ಪಿಸಿದ್ದಾರೆ. ಈಗ ಅದೇ ರನ್‌ವೇ ಶಕ್ತಿಯನ್ನು ಬಳಸಿಕೊಂಡು ಭಾರತವನ್ನು ಅಭಿವೃದ್ಧಿಯಲ್ಲಿ ವಿಶ್ವಮಟ್ಟದಲ್ಲಿ ಟೇಕಾಫ್ ಮಾಡುವ ಜವಾಬ್ದಾರಿ ಎಲ್ಲ ಭಾರತೀಯರ ಮೇಲೆ ಇದೆ ಎಂದು ಹೇಳಿದರು.
ಈ ಬಜೆಟ್ ಕೇವಲ ಆದಾಯ ತೆರಿಗೆಯ ತುಲನೆ ಮಾತ್ರವಲ್ಲ ಇದು ಭಾರತದ ವರ್ತಮಾನ ಮತ್ತು ಭವಿಷ್ಯವನ್ನು ಹೇಳಬಲ್ಲ ವಾರ್ಷಿಕ ಪ್ರಕ್ರಿಯೆ. ಮೋದಿ ಸರ್ಕಾರದ ಒಂಭತ್ತನೇ ಬಜೆಟ್ ಇದಾಗಿದ್ದು, ವಿಶ್ವಸ್ತರದಲ್ಲಿ ಭಾರತದ ಆರ್ಥಿಕತೆಯನ್ನು ತೋರಿಸುವ ಬಜೆಟ್ ಆಗಿದೆ. ವಿಶ್ವದಲ್ಲಿ ಭಾರತ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತದ ಆರ್ಥಿಕತೆ ಬ್ರಿಟನ್‌ನ್ನು ಹಿಂದಿಕ್ಕಿ ಈ ಸಾಧನೆ ಮಾಡಿದೆ ಎಂದರು.
ವಿಶ್ವ ಮಟ್ಟದಲ್ಲಿ ಭಾರತೀಯರಿಗೆ ಉದ್ಯೋಗ:
ದೇಶದಲ್ಲಿ ಯುಪಿಐ ಮುಖಾಂತರ ಡಿಜಿಟಲ್ ಪೇಮೆಂಟ್ ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಿಂತ ಭಾರತದ ಹೆಚ್ಚಾಗುತ್ತಿದೆ. ಎಂಟು ವರ್ಷಗಳಲ್ಲಿ ೪೯.೫ ಕೋಟಿ ಮಂದಿಗೆ ಬ್ಯಾಂಕ್ ಖಾತೆ, ೨೨ ಕೋಟಿಗೂ ಹೆಚ್ಚು ಶೌಚಾಲಯ, ೯.೫ ಕೋಟಿ ಎಲ್‌ಪಿಜಿ ಸಂಪರ್ಕ, ೨೬ ಲಕ್ಷ ಮನೆಗಳಿಗೆ ನೀರಿನ ಸಂಪರ್ಕ, ಕಿಸಾನ್ ಸನ್ಮಾನ್ ಸೇರಿದಂತೆ ಜನೋಪಯೋಗಿ ಯೋಜನೆ ಕಾರ್ಯಗತಗೊಳಿಸಲಾಗಿದೆ. ಮುಂದಿನ ೨೫ ವರ್ಷಗಳ ದೂರದೃಷ್ಟಿಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರದಲ್ಲಿ ಕಾಮನ್ ಸಾಫ್ಟ್‌ವೇರ್, ತಾಂತ್ರಿಕತೆ, ಸಂಶೋಧನೆಗೆ ವಿಶೇಷ ಒತ್ತು, ಸಿರಿಧಾನ್ಯಗಳಿಗೆ ಅಂತಾರಾಷ್ಟ್ರೀಯ ಮಾರ್ಕೆಟ್, ಎಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ಹೆಚ್ಚಳ ಮೂಲಕ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಲಾಗುತ್ತಿದೆ. ಈ ಮೂಲಕ ವಿಶ್ವ ಮಟ್ಟದಲ್ಲಿ ದಾದಿಯರಿಗೆ ಉದ್ಯೋಗ ಸೃಷ್ಟಿ ಮುಂದಿನ ದಿನಗಳಲ್ಲಿ ಸಾಧ್ಯವಾಗಲಿದೆ ಎಂದರು.
ಅಗ್ಗದ ಸ್ಕೀಂ ಬದಲು ಭವಿಷ್ಯದ ಸ್ಕೀಂ!:
ಭವಿಷ್ಯದ ತಂತ್ರeನಕ್ಕೆ ಭಾರತ ಸಿದ್ಧತೆ ನಡೆಸಿದೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರದಂತೆ ಯಾವತ್ತೂ ದೇಶಕ್ಕೆ ನಷ್ಟ ಆಗುವ ಅಗ್ಗದ ಕೊಡುಗೆಗಳ ಪ್ರಚಾರ ಸ್ಕೀಮ್‌ನ್ನು ನರೇಂದ್ರ ಮೋದಿ ಸರ್ಕಾರ ಮಾಡಿಲ್ಲ. ಈ ಬಾರಿ ಬಜೆಟ್‌ನಲ್ಲಿ ಇದ್ದ ಏಕೈಕ ರಾಜ್ಯದ ಹೆಸರು ಇದ್ದರೆ ಅದು ಕರ್ನಾಟಕ ಮಾತ್ರ. ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ ೫,೩೦೦ ಕೋಟಿ ರೂ. ಕಾದಿರಿಸುವ ಮೂಲಕ ಉತ್ತರ ಕರ್ನಾಟಕ ಜನತೆಯ ಬಹಳ ವರ್ಷಗಳ ನೀರಿನ ಬವಣೆಯನ್ನು ಹೋಗಲಾಡಿಸಲು ಕ್ರಮ ಕೈಗೊಂಡಿದೆ. ಬೆಂಗಳೂರಿನ ಸಬರ್ಬನ್ ರೈಲು ಯೋಜನೆಗೆ ೧,೫೦೦ ಕೋಟಿ ರೂ., ರಾಜ್ಯದ ರೈಲ್ವೆ ಮೂಲಸೌಕರ್ಯಕ್ಕೆ ಗರಿಷ್ಠ ೭,೫೦೦ ಕೋಟಿ ರೂ. ಮೀಸಲಿಟ್ಟಿದೆ. ತಂತ್ರeನ ಯುಗದಲ್ಲಿ ಕೃತಕಬುದ್ಧಿಮತ್ತೆ, ಸ್ಟಾರ್ಟಪ್, ೫ಜಿ ಲ್ಯಾಬ್ ನಿರ್ಮಾಣ ಸೇರಿದಂತೆ ವಿವಿಧ ರೀತಿಯ ಸಂಶೋಧನೆಗಳಿಗೆ ಈ ಪ್ರತ್ಯೇಕ ಮೂಲಸೌಕರ್ಯ ನಿಧಿ ಬಳಕೆಯಾಗಲಿದೆ ಎಂದರು.
ದೇಶದಲ್ಲಿ ಹಾಗೂ ರಾಜ್ಯಗಳಲ್ಲಿ ಸ್ಥಿರ ಸರ್ಕಾರಗಳಿದ್ದರೆ ಮಾತ್ರ ಅಭಿವೃದ್ಧಿ ದಾಪುಗಾಲು ಹಾಕಲು ಸಾಧ್ಯವಾಗುತ್ತದೆ. ಅತಂತ್ರ ಸರ್ಕಾರ ರಚನೆಗೆ ಅವಕಾಶ ನೀಡದೆ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ರಚನೆಗೆ ಜನತೆ ಮುಂದಾಗುತ್ತಾರೆ ಎಂದು ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಅಧ್ಯಕ್ಷತೆ ವಹಿಸಿ, ಹೇರಳ ಪ್ರಾಕೃತಿಕ ಸಂಪತ್ತು ಹೊಂದಿರುವ ಭಾರತ ಇಂದು ಜಗತ್ತಿಗೆ ಮಾರ್ಗದರ್ಶನ ಮಾಡುವಂತಾಗಿದೆ. ವಿತ್ತ ಸಚಿವೆ ನಿರ್ಮಲಾ ಮಂಡಿಸಿದ ಬಜೆಟ್ ಭಾರತವನ್ನು ವಿಶ್ವಮಾನ್ಯತೆಗೆ ಕೊಂಡೊಯ್ಯಲಿದೆ ಎಂದರು.
ಮಂಗಳೂರು ಮೇಯರ್ ಜಯಾನಂದ ಅಂಚನ್, ಸಿಎ ಅನಂತೇಶ್ ಪ್ರಭು, ಅಭಿವ್ಯಕ್ತ ಪರಿಷತ್ ಅಧ್ಯP ರವೀಂದ್ರನಾಥ್, ಆರ್ಥಿಕ ಪ್ರಕೋಷ್ಠ ರಾಜ್ಯಸದಸ್ಯ ಚಿದಾನಂದ್, ಮಂಗಳೂರು ಬಾರ್ ಕೌನ್ಸಿಲ್ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ಬಿಜೆಪಿ ಆರ್ಥಿಕ ಪ್ರಕೋಷ್ಠ ಸಂಚಾಲಕ ಸಿಎ ಶಾಂತಾರಾಮ ಶೆಟ್ಟಿ ಇದ್ದರು.

Exit mobile version