Home ನಮ್ಮ ಜಿಲ್ಲೆ ಮೀಸಲಾತಿಗೆ ಹೋರಾಟಗಳು ಫ್ಯಾನ್ಸಿಯಾಗಿವೆ

ಮೀಸಲಾತಿಗೆ ಹೋರಾಟಗಳು ಫ್ಯಾನ್ಸಿಯಾಗಿವೆ

0
eshwarappa

ಬಾಗಲಕೋಟೆ: ಅತಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ದೊರೆಯಬೇಕೆಂಬುದು ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯವಾಗಿತ್ತು. ಆದರೆ ಇಂದು ಮೀಸಲಾತಿ ಹೋರಾಟಗಳು ಫ್ಯಾನ್ಸಿಯಾಗಿವೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅತಿ ಹಿಂದುಳಿದ ಸಮುದಾಯಗಳಿಗೆ ಹತ್ತು ವರ್ಷದ ಅವಧಿಗೆ ಮೀಸಲಾತಿಯನ್ನು ನೀಡಿ ಅವುಗಳನ್ನು ಮುಂದಕ್ಕೆ ತರಬೇಕೆಂಬುದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯವಾಗಿತ್ತು. ಆದರೆ ಇಂದು ಅನೇಕರು ನಾನು ದೊಡ್ಡ ಹೋರಾಟ ಮಾಡುತ್ತೀನಿ ಎನ್ನುತ್ತಾರೆ. ನಾನೂ ಸಹ ಕಾಗಿನೆಲೆ ಶ್ರೀಗಳು ಹೋರಾಟಕ್ಕೆ ಕರೆದಾಗ ಅವರನ್ನು ಗೌರವಿಸಿ ಭಾಗಿಯಾಗಿದ್ದೆ ಎಂದರು.
ಬಲಿತವರು ಮೀಸಲಾತಿಯನ್ನು ಪಡೆಯುವುದಕ್ಕೆ ನನ್ನ ವಿರೋಧವಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಬಲಿಷ್ಠರಾಗಿದ್ದಾರೆ ಅವರಿಗೆ ಏಕೆ ಮೀಸಲಾತಿ ಸಿಗಬೇಕು. ಕಡುಬಡುವರಿಗೆ ಅದರ ಸೌಲಭ್ಯ ಒದಗಸಬೇಕೆಂದರು. ಇದೇ ಕಾರಣಕ್ಕಾಗಿಯೇ ಕುಲಶಾಸ್ತ್ರ ಅಧ್ಯಯನ ಮಾಡಿಸಲಾಗುತ್ತದೆ. ಅದರ ಪ್ರಕಾರವೇ ಮೀಸಲಾತಿಯನ್ನು ಒದಗಿಸಲಾಗುತ್ತದೆ ಎಂದರು.

Exit mobile version