Home ನಮ್ಮ ಜಿಲ್ಲೆ ಧಾರವಾಡ ಮಿನಿ ಬಸ್ಸಿಗೆ ಲಾರಿ ಡಿಕ್ಕಿ: ಹಲವರಿಗೆ ಗಂಭೀರ ಗಾಯ

ಮಿನಿ ಬಸ್ಸಿಗೆ ಲಾರಿ ಡಿಕ್ಕಿ: ಹಲವರಿಗೆ ಗಂಭೀರ ಗಾಯ

0

ಧಾರವಾಡ: ಬೆಳಗಾವಿ ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸಲು ತೆರಳುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರಿದ್ದ ಮಿನಿ ಬಸ್ಸಿಗೆ ತೇಗೂರಿನ ಬಳಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಳ್ಳಾರಿಯಿಂದ ಅನೇಕ ಜನ ಅಂಗನವಾಡಿ ಕಾರ್ಯಕರ್ತೆಯರು ಬಸ್ ಮೂಲಕ ಬೆಳಗಾವಿ ಸುವರ್ಣಸೌಧಕ್ಕೆ ಪ್ರತಿಭಟನೆ ನಡೆಸಲೆಂದು ಹೊರಟಿದ್ದ ವೇಳೆ ತೇಗೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಆರೇಳು ಜನ ಅಂಗನವಾಡಿ ಕಾರ್ಯಕರ್ತೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೆಲ ಗಾಯಾಳುಗಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Exit mobile version