Home ನಮ್ಮ ಜಿಲ್ಲೆ ಫಲಾನುಭವಿಗಳ ಸಮ್ಮೇಳನದಲ್ಲಿ ಮಹಿಳೆಯರ ಅಸಮಾಧಾನ

ಫಲಾನುಭವಿಗಳ ಸಮ್ಮೇಳನದಲ್ಲಿ ಮಹಿಳೆಯರ ಅಸಮಾಧಾನ

0

ರಾಯಚೂರು: ನಗರ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನದಲ್ಲಿ ಬಡ ಮಹಿಳೆಯರು ಅಡುಗೆ ಅನಿಲ್ ಬೆಲೆ ಏರಿಕೆ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಸಚಿವ ಹಾಲಪ್ಪ ಆಚಾರ ಅವರು ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ “ಏನು ನೀವು ಭಾಷಣ ಮಾಡೋದು..” “ಗ್ಯಾಸ್ ರೇಟ್ ಹೆಚ್ಚಾಗಿದೆ..ನಾವು ಕೂಲಿ ಮಾಡಿ ಬದುಕೋರು..” “ಎಲ್ಲಿಂದ ಹಣ ತರೋದು..” ಅಂತ ಕಿಡಿಕಾರಿದರು.
ಸಚಿವ ಹಾಲಪ್ಪ ಆಚಾರ್ ಭಾಷಣದ ವೇಳೆ ಮಹಿಳೆಯರು ಗರಂ.. ಗ್ಯಾಸ್ ನೀಡುತ್ತಿದ್ದೇವೆ ಅಂತ ಸಚಿವರು ಪ್ರಸ್ತಾಪಿಸುತ್ತಿದ್ದಂತೆ ಗರಂ ಆದ ಮಹಿಳೆಯರು. ಇದರಿಂದ ಬಿಜೆಪಿ ಜನಪ್ರತಿನಿಧಿಗಳಿಗೆ ತೀವ್ರ ಮುಜಗರ ಉಂಟಾಯಿತು.

ಫಲಾನುಭವಿಗಳ ಸಮ್ಮೇಳನದಲ್ಲಿ ಮಹಿಳೆಯರ ಅಸಮಾಧಾನ

Exit mobile version