Home ತಾಜಾ ಸುದ್ದಿ ಪ್ರಿಯಾಂಕ್ ಖರ್ಗೆ ನಾಮಪತ್ರ ಸಲ್ಲಿಕೆ

ಪ್ರಿಯಾಂಕ್ ಖರ್ಗೆ ನಾಮಪತ್ರ ಸಲ್ಲಿಕೆ

0

ವಾಡಿ: ಚಿತ್ತಾಪುರ ಮೀಸಲು ಮತಕ್ಷೇತ್ರದಿಂದ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಚಿತ್ತಾಪುರ ಬೆಳಗ್ಗೆ ಪಟ್ಟಣದ ಐತಿಹಾಸಿಕ ನಾಗಾವಿ ನಾಗಲಾಂಬ ದೇವಿಯ ದೇವಸ್ಥಾನದಲ್ಲಿ ಹೋಮ ಹವನ ನಡೆಸುವ ಮೂಲಕ ಚಿತ್ತಾಶಾವಲಿ ದರ್ಗಾದವರಿಗೆ ಪಾದಯಾತ್ರೆ ನಡೆಸಿದ ಪ್ರಿಯಾಂಕ್, ದರ್ಗಾ ಗುರುಗಳ ಆಶೀರ್ವಾದ ಪಡೆದರು. ನಂತರ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ಹೊರಟು ತಮ್ಮ ಸಾವಿರಾರು ಜನ ಬೆಂಬಲಿಗರೊಂದಿಗೆ ತಹಸೀಲ್ದಾರರಿಗೆ ನಾಮಪತ್ರ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ವಾಡಿ ಬ್ಲಾಕ್ ಅಧ್ಯಕ್ಷ ಸೈಯದ್ ಮಹೆಮೂದ್ ಸಾಹೇಬ, ಪಕ್ಷದ ಹಿರಿಯ ಮುಖಂಡರಾದ ನಾಗರೆಡ್ಡಿ ಪಾಟೀಲ್ ಕರದಾಳ, ತಿಪ್ಪಣ್ಣಪ್ಪ ಕಮಕನೂರ, ಶಿವಾನಂದ ಪಾಟೀಲ ಮರತೂರು, ರಮೇಶ ಮರಗೋಳ, ಶ್ರೀನಿವಾಸ ಸಗರ, ವೀರಣ್ಣಗೌಡ ಪರಸರೆಡ್ಡಿ, ಮುಕ್ತಾರ ಪಟೇಲ, ಅಜೀಜ್ ಸೇಠ, ಶಂಕ್ರಯ್ಯಸ್ವಾಮಿ ಮದರಿ, ಶಿವುರುದ್ರ ಭೀಣಿ ಪಾಲ್ಗೊಂಡಿದ್ದರು.

Exit mobile version