Home ನಮ್ಮ ಜಿಲ್ಲೆ ಧಾರವಾಡ ತ್ರಿವರ್ಣ ಧ್ವಜ, ಗಣೇಶ ವಿಗ್ರಹ ಪ್ರದಾನ

ತ್ರಿವರ್ಣ ಧ್ವಜ, ಗಣೇಶ ವಿಗ್ರಹ ಪ್ರದಾನ

0

ಧಾರವಾಡ: ವಿಧಿವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್ ಉದ್ಘಾಟನೆ ನೆರವೇರಿಸಲು ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ ಶಾ ಅವರಿಗೆ ಧಾರವಾಡದ ಜನತೆ ಪರವಾಗಿ ತ್ರಿವರ್ಣ ಧ್ವಜ ಮತ್ತು ಗಣೇಶ ವಿಗ್ರಹವನ್ನು ವಿತರಿಸಲಾಯಿತು.
ಕೃಷಿ ವಿವಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಮಹಾಪೌರ ಈರೇಶ ಅಂಚಟಗೇರಿ ಅವರು ಅಮಿತ ಶಾ ಅವರಿಗೆ ರೋಸ್ ವುಡ್ ನಲ್ಲಿ ಸಿದ್ಧಗೊಂಡ ಅಪರೂಪದ ಗಣೇಶ ವಿಗ್ರಹ ಹಾಗೂ ಗರಗ ರಾಷ್ಟ್ರಧ್ವಜ ತಯಾರಿಕಾ ಘಟಕದಲ್ಲಿ ನಿರ್ಮಿಸಲಾದ ರಾಷ್ಟ್ರ ಧ್ವಜವನ್ನು ವಿತರಿಸಲಾಯಿತು. ಗೃಹ ಸಚಿವರ ಆಗಮನದ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Exit mobile version