Home ನಮ್ಮ ಜಿಲ್ಲೆ ಚಿಕ್ಕಮಗಳೂರು ತೇಜಸ್ವಿಸೂರ್ಯ ಡೋರ್ ಓಪನ್ ಮಾಡಿಲ್ಲ

ತೇಜಸ್ವಿಸೂರ್ಯ ಡೋರ್ ಓಪನ್ ಮಾಡಿಲ್ಲ

0

ಚಿಕ್ಕಮಗಳೂರು: ‌ಸಂಸದ ತೇಜಸ್ವಿಸೂರ್ಯ ಫ್ಲೈಟ್ ಡೋರ್ ಓಪನ್ ಮಾಡಿಲ್ಲ ಎಂದು ತೇಜಸ್ವಿಸೂರ್ಯ ಅವರ ನಡೆಯನ್ನ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸಂಸದರು ಬುದ್ಧಿವಂತ, ಜವಾಬ್ದಾರಿ ಸ್ಥಾನದಲ್ಲಿದ್ದಾರೆ ಅವರು ಡೋರ್ ಓಪನ್ ಮಾಡಿಲ್ಲ. ಅವರು ಕೂತಿದ್ದು ಎಮರ್ಜೆನ್ಸ್ ಎಕ್ಸಿಟ್ ಸೀಟಿನಲ್ಲಿ, ಎಟಿಆರ್ ಫ್ಲೈಟ್ ಸೀಟಲ್ಲಿ ಹ್ಯಾಂಡ್ ರೆಸ್ಟ್ ಇರಲ್ಲ. ಅಲ್ಲಿ ಎಕ್ಸಿಟ್ ಡೋರ್‍ನಲ್ಲಿ ಬ್ಲಿಡಿಂಗ್ ಸ್ವಲ್ಪ ಓಪನ್ ಇತ್ತು, ಅದನ್ನ ಏರ್ ಹಾಸ್ಟೆಸ್ ಗಮನ ತಂದ್ರು. ಪೈಲೆಟ್ ಬಂದು ಡಿಬೋರ್ಡಿಂಗ್ ಮಾಡಿ, ಸರಿಯಾಗಿ ಫಿಟ್ ಮಾಡಿದ್ರು, ಅಲ್ಲಿ ತೇಜಸ್ವಿ ಇನ್ಸಟೆಂಟ್ ರಿಪೋರ್ಟ್ ಕೊಟ್ರು. ಇಂಡಿಗೋ ಅವರೇ ಕ್ಲಾರಿಫಿಕೇಶನ್ ಮಾಡಿ, ಇನ್ಸಟೆಂಟ್ ರಿಪೋರ್ಟ್ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಕಾಂಗ್ರೆಸ್‍ಗೆ ಮಾತನಾಡಲು ಬೇರೆ ವಿಷಯ ಇಲ್ಲ, ಇಂತಹ ವಿಷಯವನ್ನ ಮಾತನಾಡುತ್ತಿದ್ದಾರೆ ಎಂದರು.

ತೇಜಸ್ವಿಸೂರ್ಯ ಡೋರ್ ಓಪನ್ ಮಾಡಿಲ್ಲ

Exit mobile version