ಕಾರ್ಕಳ: ಜೋಕಾಲಿಯಲ್ಲಿ ಆಟವಾಡುತ್ತಿದಾಗ ಕುತ್ತಿಗೆಗೆ ಸೀರೆಯ ಜೋಕಾಲಿ ಬಿಗಿದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಕೆಮ್ಮಣ್ಣುವಿನಲ್ಲಿ ನಡೆದಿದೆ. ಮನೆಯ ಸಮೀಪದಲ್ಲಿ ಸೀರೆಯ ಜೋಕಾಲಿ ಕಟ್ಟಿ ಆಟವಾಡುವ ಸಂದರ್ಭದಲ್ಲಿ ಸೀರೆ ಕುತ್ತಿಗೆಗೆ ಬಿಗಿದು ಬಾಲಕಿ ಮಾನ್ವಿ (೯) ಮೃತಪಟ್ಟಿದ್ದಾಳೆ. ಎಂದಿನಂತೆ ಮಧ್ಯಾಹ್ನ ದೇವಾಲಯಕ್ಕೆ ತೆರಳಿ ಬಳಿಕ ಮನೆಯ ಪಕ್ಕದಲ್ಲಿ ಕಟ್ಟಲಾದ ಸೀರೆಯ ಜೋಕಾಲಿಯಲ್ಲಿ ಆಡುತ್ತಿರುವ ಸಂದರ್ಭ ಘಟನೆ ನಡೆದಿದೆ. ಕೆಮ್ಮಣ್ಣು ಪ್ರಾಥಮಿಕ ಶಾಲೆಯಲ್ಲಿ ೪ ನೇ ತರಗತಿಯ ವಿದ್ಯಾರ್ಥಿಯಾಗಿದ್ದಳು.