Home ನಮ್ಮ ಜಿಲ್ಲೆ ಜಿಎಸ್ ಟಿ ಪ್ರಕರಣಗಳಿಗೆ ಟ್ರಿಬ್ಯುನಲ್ ರಚಿಸಲು ಮುಂದಿನ ಸಭೆಯಲ್ಲಿ ತೀರ್ಮಾನ: ಸಿಎಂ ಬಸವರಾಜ ಬೊಮ್ಮಾಯಿ

ಜಿಎಸ್ ಟಿ ಪ್ರಕರಣಗಳಿಗೆ ಟ್ರಿಬ್ಯುನಲ್ ರಚಿಸಲು ಮುಂದಿನ ಸಭೆಯಲ್ಲಿ ತೀರ್ಮಾನ: ಸಿಎಂ ಬಸವರಾಜ ಬೊಮ್ಮಾಯಿ

0
BASAVARAJ BOMAI

ಬೆಂಗಳೂರು: 48ನೇ ಜಿಎಸ್ ಟಿ ಕೌನ್ಸಿಲ್ ಸಭೆ ನಡೆಸಲಾಗಿದ್ದು, ಕಾನೂನು ಸಮಿತಿ, ಫಿಟ್ಮೆಂಟ್ ಸಮಿತಿ, ವಿಧಿವಿದಾನಗಳು, ಮತ್ತಿತರ ವಿಷಯಗಳ ಬಗ್ಗೆ ಕೆಲವೊಂದು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ತಿಳಿಸಿದರು.
ಅವರು ಇಂದು 48 ಜಿಎಸ್ ಟಿ ಕೌನ್ಸಿಲ್ ಸಭೇಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಜಿಎಸ್ ಟಿಗೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳು ಉಚ್ಛ ನ್ಯಾಯಾಲಯಕ್ಕೆ ಹೋಗುತ್ತಿವೆ. ಅದಕ್ಕಾಗಿ ಟ್ರಿಬ್ಯೂನಲ್ ರಚನೆ ಮಾಡುವ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಟ್ರಿಬ್ಯೂನಲ್ ರಚನೆಯಾದರೆ ಬಹಳಷ್ಟು ಪ್ರಕರಣಗಳಿಗೆ ಅತಿಶೀಘ್ರದಲ್ಲಿ ಪರಿಹಾರ ದೊರೆಯುತ್ತದೆ. ಇದರಿಂದ ರಾಜ್ಯದ ಆದಾಯಕ್ಕೂ ಅನುಕೂಲವಾಗುತ್ತದೆ. ಸರ್ಕಾರಿ ಸಂಸ್ಥೆಗಳಿಗೆ ಜಿಎಸ್ ಟಿಯಿಂದ ವಿನಾಯ್ತಿ ಇರುವಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಬಿಬಿಎಂಪಿ, ಬೆಂಗಳೂರು ಜಲಮಂಡಳಿ, ವಿದ್ಯುಚ್ಛಕ್ತಿ ಮಂಡಳಿ ಇವುಗಳಿಗೂ ವಿನಾಯ್ತಿ ನೀಡಬೇಕೆನ್ನುವ ಬಗ್ಗೆ, ಯಾವ ಸೇವೆಗಳಿಗೆ ವಿನಾಯ್ತಿ ನೀಡುವ ಬಗ್ಗೆಯೂ ಕೆಲವೊಂದು ತಿದ್ದುಪಡಿಗಳನ್ನು ಮಾಡುವ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ತನಿಖೆಯಿಂದ ಎಲ್ಲ ಸತ್ಯಾಸತ್ಯತೆಗಳು ಹೊರಬರುತ್ತವೆ :
ಪಿಎಸ್ ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಗೃಹ ಸಚಿವರು ಮಾತನಾಡಿರುವ ಆಡಿಯೋ, ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ ಎಂಬ ಹೇಳಿಕೆ ಬಗ್ಗೆ ಉತ್ತರಿಸಿ, ಪ್ರಿಯಾಂಕ ಖರ್ಗೆಯವರೇ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಅದರ ಬಗ್ಗೆ ಅವರೇ ಇನ್ನು ಸ್ಪಷ್ಟವಾದ ಉತ್ತರ ನೀಡಿಲ್ಲ. ಈ ಆಡಿಯೋದ ಬಗ್ಗೆ ನನಗೆ ಸಂಪೂರ್ಣ ಮಾಹಿತಿಯಿಲ್ಲ. ಹಾಗೂ ತನಿಖೆಯಿಂದ ಎಲ್ಲ ಸತ್ಯಾಸತ್ಯತೆಗಳು ಹೊರಬರುತ್ತವೆ ಎಂದರು.

Exit mobile version