Home ತಾಜಾ ಸುದ್ದಿ ಜನತಾದರ್ಶನಕ್ಕೆ ಬಸ್ ನಲ್ಲಿ ಹೊರಟ ಜಿಲ್ಲಾಡಳಿತ

ಜನತಾದರ್ಶನಕ್ಕೆ ಬಸ್ ನಲ್ಲಿ ಹೊರಟ ಜಿಲ್ಲಾಡಳಿತ

0

ಬಾಗಲಕೋಟೆ: ಜಿಲ್ಲೆಯ ತೇರದಾಳ ದಲ್ಲಿ ಮಂಗಳವಾರ ನಡೆಯುವ ಜಿಲ್ಲಾಧಿಕಾರಿ ಜನತಾದರ್ಶನ ಕಾರ್ಯಕ್ರಮಕ್ಕೆ ಡಿಸಿ ಕೆ.ಎಂ.ಜಾನಕಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರಿಗೆ ಸಂಸ್ಥೆ ಬಸ್ ಮೂಲಕ ಟಿಕೆಟ್ ಪಡೆದು ಪ್ರಯಾಣ ಆರಂಭಿಸಿದ್ದಾರೆ.

ಮಹಿಳಾ ಅಧಿಕಾರಿಗಳು ಶಕ್ತಿ ಯೋಜನೆಯಡಿ ತಮ್ಮ ಆಧಾರ್ ಕಾರ್ಡ್ ತೋರಿಸಿ ಶೂನ್ಯ ದರ ಟಿಕೆಟ್ ಪಡೆದಿದ್ದಾರೆ.

ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಪರಿಸರ ಮಾಲಿನ್ಯ ಕಡಿಮೆ ಮಾಡುವ ಸಲುವಾಗಿ ಎಲ್ಲ ಅಧಿಕಾರಿಗಳು ತಮ್ಮ ಸರಕಾರಿ ವಾಹನವನ್ನು ಉಪಯೋಗಿಸದೇ, ಜಿಲ್ಲಾಧಿಕಾರಿಗಳೊಂದಿಗೆ ಸರ್ಕಾರಿ ಬಸ್ ಮೂಲಕವೇ ಪ್ರಯಾಣ ಆರಂಭಿಸಿದ್ದಾರೆ‌.

Exit mobile version