Home ನಮ್ಮ ಜಿಲ್ಲೆ ಗಾಣಾಳು ಪಾಲ್ಸ್‌ನಲ್ಲಿ ನೀರುಪಾಲಾಗಿದ್ದ ಯುವಕನ ಮೃತದೇಹ ಪತ್ತೆ

ಗಾಣಾಳು ಪಾಲ್ಸ್‌ನಲ್ಲಿ ನೀರುಪಾಲಾಗಿದ್ದ ಯುವಕನ ಮೃತದೇಹ ಪತ್ತೆ

0

ಹಲಗೂರು : ಗಾಣಾಳು ಪಾಲ್ಸ್ ನಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದ ಯುವಕ ಶವ ಎರಡು ದಿನಗಳ ನಂತರ ಪತ್ತೆಯಾಗಿದೆ.
ಮಂಡ್ಯ ತಾಲೂಕು ಸಬ್ಬನಹಳ್ಳಿ ಗ್ರಾಮದ ಮನುಕುಮಾರ್ (27 ) ಫಾಲ್ಸ್ ನಲ್ಲಿ ಈಜಲು ಹೋಗಿದ್ದಾಗ ನೀರುಪಾಲಾಗಿದ್ದನು. ಇಂದು ಈತನ ಶವ ಪತ್ತೆಯಾಗಿದೆ
ಖಾಸಗಿ ಬಸ್ ನ ಡ್ರೈವರ್ ಕೆಲಸ ಮಾಡುತ್ತಿದ್ದ ಮನು ಸ್ನೇಹಿತರ ಜೊತೆಗೂಡಿ ಭಾನುವಾರ ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಗಾಣಾಳು ಪಾಲ್ಸ್.ಗೆ ತೆರಳಿದ್ದನು.ಈಜಲು ನೀರಿಗೆ ಇಳಿದಿದ್ದ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದನು.
ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಯುವಕನ ಮೃತ ದೇಹಕ್ಕಾಗಿ ಹುಡುಕಾಟ ನಡೆಸಲಾಗಿತ್ತು.ಮಂಗಳವಾರ ಮೃತ ಯುವಕನ ದೇಹ ಪತ್ತೆಯಾಗಿದ್ದು,ಮರಣೋತ್ತರ ಪರೀಕ್ಷೆಗಾಗಿ ಮಳವಳ್ಳಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದು,ಹಲಗೂರು ಠಾಣೆಯ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ

Exit mobile version