Home ನಮ್ಮ ಜಿಲ್ಲೆ ಧಾರವಾಡ ಕೆಲವರು ಬಿಜೆಪಿ ಏಜೆಂಟರ್ ಆಗಿ ವರ್ತಿಸುತ್ತಿದ್ದಾರೆ: ದೀಪಕ ಚಿಂಚೋರೆ

ಕೆಲವರು ಬಿಜೆಪಿ ಏಜೆಂಟರ್ ಆಗಿ ವರ್ತಿಸುತ್ತಿದ್ದಾರೆ: ದೀಪಕ ಚಿಂಚೋರೆ

0

ಧಾರವಾಡ: ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಮತ್ತು ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ ಅವರು ಬಿಜೆಪಿ ಏಜೆಂಟರ್ ಆಗಿ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ನೇರ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 15000 ಹೆಚ್ಚು ಕಾಂಗ್ರೆಸ್ ಮತದಾರರ ಹೆಸರು ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಅಲ್ಲದೇ ಕೆಲವರದ್ದು ಬದುಕಿದ್ದರೂ ಸತ್ತಿದ್ದಾರೆ ಎಂದು ತೆಗೆದು ಹಾಕಲಾಗಿದೆ. ಶಾಸಕ ಅರವಿಂದ ಬೆಲ್ಲದ ಅವರು ಒತ್ತಡ ಹೇರಿ ಈ ರೀತಿ ಮಾಡಿಸುತ್ತಿದ್ದಾರೆ ಎಂದು ದೂರಿದರು.

Exit mobile version