Home ನಮ್ಮ ಜಿಲ್ಲೆ ಕೆರೆಯಲ್ಲಿ ಮುಳುಗಿ ಸಹೋದರರ ದುರ್ಮರಣ

ಕೆರೆಯಲ್ಲಿ ಮುಳುಗಿ ಸಹೋದರರ ದುರ್ಮರಣ

0

ಚಿಟಗುಪ್ಪ (ಬೀದರ್ ಜಿಲ್ಲೆ) : ತಾಲೂಕಿನ ಬೇಮಳಖೇಡ ಸರ್ಕಾರಿ ಪ್ರಾಢಶಾಲೆ ಬಳಿಯ ಕೆರೆಯಲ್ಲಿ ಸಹೋದರರಿಬ್ಬರು ಮುಳುಗಡೆಗೊಂಡಿ ಉಸಿರುಗಟ್ಟಿ ಸಾವಿಗಿಡಾಗಿದ್ದಾರೆ.
ಸಾವಿಗಿಡಾದವರನ್ನು ಬೇಮಳಖೇಡ ಗ್ರಾಮದ 9ನೇ ತರಗತಿ ವಿದ್ಯಾರ್ಥಿಗಳಾಗಿದ್ದ ಗಣೇಶ ಮತ್ತು ಸಾಯಿ ಎಂದು ಗುರುತಿಸಲಾಗಿದೆ. ಅ. 7 ರಿಂದ ಶಾಲೆಗೆ ರಜೆ ನೀಡಲಾಗಿದೆ. ಈ ಇಬ್ಬರು ಸಹೋದರರು ಸೋಮವಾರ ಸಂಜೆ ಕೆರೆಯ ಬಳಿಗೆ ಹೋಗಿದ್ದರು. ಈ ಸಂಧರ್ಭದಲ್ಲಿ ಒಬ್ಬ ಬಾಲಕ ಕಾಲು ಜಾರಿ ಕೆರೆಗೆ ಬಿದ್ದ. ಇದೆ ರೀತಿಯಾಗಿ ಇನ್ನೊಬ್ಬ ಬಾಲಕ ಕೂಡ ಕೆರೆಗೆ ಬಿದ್ದು ಅವಾಂತರ ಸಂಭವಿಸಿದ್ದಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪಾಲಕರು ತಮ್ಮ ಮಕ್ಕಳು ಕಾಣೆಯಾಗಿದ್ದಾರೆ ಎಂದು ಸೋಮವಾರ ದೂರು ನೀಡಿರಲಿಲ್ಲ. ಆದ್ದರಿಂದ ಸೋಮವಾರ ಬಾಲಕರ ಹುಡುಕಾಟ ನಡೆಸಿರಲಿಲ್ಲ. ಕೆರೆಯಿಂದ ಬಾಲಕರ ಮೃತದೇಹ ಇಂದು ಮಂಗಳವಾರ ಹೊರ ತೆಗೆಯಲಾಗಿದೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.

Exit mobile version