Home ನಮ್ಮ ಜಿಲ್ಲೆ ದಾವಣಗೆರೆ ಕಾಂತಾರ ಸಿನಿಮಾ ವೀಕ್ಷಿಸಿದ ಡಿಸಿ, ಎಸ್ಪಿ

ಕಾಂತಾರ ಸಿನಿಮಾ ವೀಕ್ಷಿಸಿದ ಡಿಸಿ, ಎಸ್ಪಿ

0
KANTARA

ದಾವಣಗೆರೆ: ಕರಾವಳಿ ಜಿಲ್ಲೆಗಳ ಸಂಸ್ಕೃತಿಯನ್ನು ಬಿಂಬಿಸುವ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರಾ ಚಲನಚಿತ್ರವನ್ನು ನಗರದ ಗೀತಾಂಜಲಿ ಚಿತ್ರ ಮಂದಿರದಲ್ಲಿ ಪೊಲೀಸರು ತಮ್ಮ ಕುಟುಂಬ ಸಮೇತರಾಗಿ ಶುಕ್ರವಾರ ಸಂಜೆ ವೀಕ್ಷಿಸಿದರು.
ನಗರದ ಗೀತಾಂಜಲಿ ಚಿತ್ರ ಮಂದಿರದ ಒಂದು ಪ್ರದರ್ಶನವನ್ನು ಕಾಂತಾರ ಸಿನಿಮಾ ವೀಕ್ಷಿಸಲೆಂದೇ ಪೊಲೀಸ್ ಅಧಿಕಾರಿ, ಸಿಬ್ಬಂದಿಗಾಗಿ ಕಾಯ್ದಿರಿಸಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ.ರಿಷ್ಯಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಿ.ಬಸರಗಿ ಸೇರಿದಂತೆ ಹಿರಿಯ ಅಽಕಾರಿಗಳು ಚಿತ್ರ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಪೊಲೀಸ್ ಸಿಬ್ಬಂದಿ, ಕುಟುಂಬ ಸಮೇತರಾಗಿ ಸಿನಿಮಾ ವೀಕ್ಷಿಸಿ, ಕಾಂತಾರಾ ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಕಾಂತಾರ ಸಿನಿಮಾ ದೈವಾರಾಧನೆ ಜೊತೆಗೆ ಪರಿಸರ ಸಂರಕ್ಷಣೆ, ಬಡವರ ನೋವು, ಸಂಕಟವನ್ನು ಬಿಚ್ಚಿಡುವ ಮಹತ್ವದ ಸಂದೇಶ ಸಾರುವ ಸಿನಿಮಾವಾಗಿದೆ. ಕನ್ನಡ ಸಿನಿಮಾ ಲೋಕಕ್ಕೆ ಇದೊಂದು ಮಹತ್ವದ ಮೈಲುಗಲ್ಲೆಂದರೆ ತಪ್ಪಿಲ್ಲ.

Exit mobile version